ರಾಜ್ಯ

ಪಂಜರದೊಳಗೆ ಮನುಜ ಕುಲ… ಕಾಡಿನ ಹೆದ್ದಾರಿಗಳಲ್ಲಿ ನಿರಾತಂಕವಾಗಿ ಓಡಾಡ್ತಿವೆ ಪ್ರಾಣಿ ಸಂಕುಲ!

Lingaraj Badiger

ಚಾಮರಾಜನಗರ: ನೂರಾರು ವಾಹನಗಳ ಸದ್ದಿಗೆ ಅವಿತುಕೊಂಡು ರಾತ್ರಿ ವೇಳೆ ತಿರುಗಾಡುತ್ತಿದ್ದ ವನ್ಯಜೀವಿಗಳು, ಕೊರೋನಾ ವೈರಸ್​​ಗೆ ಹೆದರಿ ಮನುಷ್ಯ ತನ್ನ ಚೇಷ್ಟೆಗಳನ್ನು ಪಕ್ಕಕ್ಕಿಟ್ಟು ಮನೆಯಲ್ಲೇ ಇರುವುದರಿಂದ ಪ್ರಾಣಿಗಳು, ಕಾನನದಲ್ಲಿ ಪಕ್ಷಿಗಳ ಕಲರವ ಲವಲವಿಕೆಯಿಂದ ಕೂಡಿದೆ.

ಇಡೀ ದೇಶವೇ ಈಗ ಕೊರೊನಾ ಕರಿಛಾಯೆಗೆ ಲಾಕ್ ಡೌನ್ ಆಗಿರುವುದರಿಂದ ಕೊರೊನಾ ಭೀತಿಗೆ ಮನುಷ್ಯ ಮನೆಯಲ್ಲಿ ಬಂಧಿಯಾಗಿದ್ದರೆ ಪ್ರಾಣಿಗಳು ಮಾತ್ರ ಮನುಷ್ಯನ ಗೈರು ಹಾಜರಿಯಲ್ಲಿ ನಿರಾಂತಕವಾಗಿ ಸಂಚರಿಸುತ್ತಿವೆ. 

ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ, ಕೆ.ಗುಡಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ, ಊಟಿ ರಸ್ತೆಯಲ್ಲಿ ಅಗತ್ಯ ವಸ್ತುಗಳ ವಾಹನಗಳ ಓಡಾಟ ಬಿಟ್ಟರೇ ಇನ್ನೆಲ್ಲವೂ ಬಂದ್​ ಆಗಿರುವುದರಿಂದ ಜಿಂಕೆ, ಕಾಡೆಮ್ಮೆ, ಕಡವೆಗಳಂತೂ ರಸ್ತೆಬದಿಯಲ್ಲೇ ಆರಾಮಾಗಿ ನಿಲ್ಲುತ್ತಿದ್ದು, ಸ್ವತಂತ್ರವಾಗಿ ವಿರಮಿಸುತ್ತಿವೆ.

ಮೂಲೆಹೊಳೆ ರಸ್ತೆ, ಪುಣಜನೂರು ರಸ್ತೆ ಮಧ್ಯೆ ಆನೆಗಳಂತೂ ರಸ್ತೆಯಲ್ಲೇ ಗಂಟೆಗಟ್ಟಲೇ ನಿಲ್ಲುತ್ತಿದ್ದು, ಕೊರೋನಾ ಪ್ರಾಣಿಗಳಿಗೆ ಉತ್ತಮವಾಗಿಯೇ ಪರಿಣಾಮ ಬೀರಿದೆ. ಇನ್ನು, ಈ ಕುರಿತು ವನ್ಯಜೀವಿ ಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಇಲ್ಲಿಯವರೆಗೆ ಅವುಗಳು ಪಂಜರದೊಳಗೆ ಇದ್ದವು ಈಗ ಕೊರೋನಾ ವೈರಸ್ ನಿಂದ ಮನುಷ್ಯನು ಗೃಹಬಂಧನದಲ್ಲಿದ್ದು, ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

-ಗುಳಿಪುರ ನಂದೀಶ

SCROLL FOR NEXT