ರಾಜ್ಯ

ಹೊಸತೊಡಕಿನ ಸಂಭ್ರಮದಲ್ಲಿ ನಗರದ ಜನತೆ: ಪಾಪಣ್ಣ ಮಟನ್ ಸ್ಟಾಲ್ ನಲ್ಲಿ ಸರದಿ ಸಾಲು, ಗಗನಕ್ಕೇರಿದ ಮಾಂಸದ ಬೆಲೆ

Shilpa D

ಬೆಂಗಳೂರು: ಯುಗಾದಿ ಮಾರನೇ ದಿನ ದಕ್ಷಿಣ ಕರ್ನಾಟಕದ ಜನತೆ ಮಾಂಸದೂಟ ಸೇವಿಸುವುದು ಸಂಪ್ರದಾಯ, ಅದಕ್ಕ ಸಿಲಿಕಾನ್ ಸಿಟಿಯ ಜನವೂ ಹೊರತಲ್ಲ, ಕೊರೋನಾ ಲೈರಸ್ ಸೋಂಕಿನ ಭೀತಿಯಿದ್ದರೂ ನಿನ್ನೆ ಬ್ಯಾಟರಾನಪುರದಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.

ಪಾಪಣ್ಣ ಮಟನ್ ಸ್ಟಾಲ್ ನ ಖಾಯಂ ಗಿರಾಕಿಗಳು ನಿನ್ನೆ ಗಂಟೆಗಟ್ಟಲೇ ದೂರ ದೂರ ನಿಂತು ಸರದಿಯಲ್ಲಿ ಕಾದು ಮಾಂಸ ಖರೀದಿಸಿದ್ದಾರೆ,

73 ವರ್ಷದ ಹಿಂದೆ ಬ್ಯಾಟರಾಯನಪುರದಲ್ಲಿ ಆರಂಭವಾದ ಈ ಅಂಗಡಿ ಮೈಸೂರು ರೋಡ್ ನಲ್ಲಿದೆ ಕನಕಪುರ, ರಾಮನಗರ ಮತ್ತು ಮಾಗಡಿ ಗಳಿಂದ ಕುರಿಗಳನ್ನು ತಂದು ಕಟ್ ಮಾಡಿ ಮಾರಲಾಗುತ್ತದೆ. ಉತ್ತಮ ಗುಣಮಟ್ಟದ ಮಾಂಸ ನೀಡುವುದರಿಂದ ಬೆಂಗಳೂರಿನ ಹಲವು ಕಡೆಯಿಂದ ಇಲ್ಲಿಗೆ ಬರುತ್ತಾರೆ. ಸದ್ಯ ಪಾಪಣ್ಣ ಅವರ ಮೊಮ್ಮಗ ಈ ಅಂಗಡಿ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಯುಗಾದಿ ಮಾರನೇ ದಿನ ಅಧಿಕ ಮಂದಿ ಮಟನ್ ಖರೀದಿಸಲು ಬರುತ್ತಾರೆ. ಈ ಬಾರಿ 1,500 ಕೆಜಿ ಮಾರಾಟವಾಗುತ್ತದೆ ಎಂದು ನಿರೀಕ್ಷಿಸಿದ್ದೆವು, ಆದರೆ ಕೊರೋನಾ ಭೀತಿಯಿಂದಾಗಿ ಖರೀದಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.  ಬೆಳಗ್ಗೆ 6 ಗಂಟೆಗೆ  ಅಂಗಡಿ ತೆರದಿದ್ದೆವು.ಆದರೆ ತೀರಾ ಕಡಿಮೆ ವ್ಯಾಪಾರ ನಡೆದಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಕೆಜಿಗೆ 550-600 ರು ಇದ್ದ  ಬೆಲೆ 750ಕ್ಕೇರಿದೆ.

SCROLL FOR NEXT