ಸಂಗ್ರಹ ಚಿತ್ರ 
ರಾಜ್ಯ

ಏಪ್ರಿಲ್ 14ರ ವರೆಗೆ ಮದ್ಯ ಮಾರಾಟ ನಿಷೇಧ: ಅಬಕಾರಿ ಅಕ್ರಮಗಳಿಗೆ ದೂರು ನೀಡಲು ಮನವಿ: ರಾಜ್ಯ ಸರ್ಕಾರ

ಕೋವಿಡ್-19 ವೈರಸ್ ಸೊಂಕು ತಡೆಗಟ್ಟಲು ಹಾಗೂ ಎಲ್ಲಾ ಮದ್ಯದಂಗಡಿಗಳನ್ನು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಿದ್ದು, ಅಕ್ರಮ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.

ಬೆಂಗಳೂರು: ಕೋವಿಡ್-19 ವೈರಸ್ ಸೊಂಕು ತಡೆಗಟ್ಟಲು ಹಾಗೂ ಎಲ್ಲಾ ಮದ್ಯದಂಗಡಿಗಳನ್ನು ಏಪ್ರಿಲ್ 14 ರವರೆಗೆ ಲಾಕ್ ಡೌನ್ ಮಾಡಿದ್ದು, ಅಕ್ರಮ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರ ಮಾರ್ಚ್ 31, 2020ರ ವರೆಗೆ ಮದ್ಯದಂಗಡಿ ಮುಚ್ಚಲು ಆದೇಶಿಸಿತ್ತು. ಅಲ್ಲದೆ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಏಪ್ರಿಲ್ 14, 2020ರ ವರೆಗೆ ಸಂಪೂರ್ಣ ಲಾಕ್ಡೌನ್ ಮಾಡಲು  ಸೂಚಿಸಿರುವ ಕಾರಣ ಬೆಂಗಳೂರು ನಗರ ಜಿಲ್ಲೆ (ಉತ್ತರ) ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ, ಕಳ್ಳಭಟ್ಟಿ ತಯಾರಿಕೆ, ಸೇಂದಿ ಮಾರಾಟ, ಸಿಹೆಚ್ ಪೌಡರ್ ಮತ್ತು ಇತರೆ ಅಕ್ರಮ ವಸ್ತುಗಳಿಂದ ಸಾರ್ವಜನಿಕರ ಸ್ಚಾಸ್ತಕ್ಕೆ ಹಾನಿಯಾಗಿ ಸಂಭವನೀಯ  ದುರಂತಗಳನ್ನು ತಪ್ಪಿಸುವ ಸಲುವಾಗಿ ಇಲಾಖೆಯಲ್ಲಿ ಜಾರಿ ಮತ್ತು ತನಿಖೆ ಕಾರ್ಯಾಚರಣೆಗಾಗಿ ತಂಡಗಳನ್ನು ರಚಿಸಿದೆ.

ಸಾರ್ವಜನಿಕರು ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಬೆಂಗಳೂರು ನಗರ ಜಿಲ್ಲೆ (ಉತ್ತರ) ವ್ಯಾಪ್ತಿಯ ಅಬಕಾರಿ ಉಪ ಆಯುಕ್ತರು 9449595770, ಯಶವಂತಪುರ ಇಐಬಿಯ ಅಬಕಾರಿ ನಿರೀಕ್ಷಕರು 9449597288, ಗೋಕುಲ ವಲಯ ಅಬಕಾರಿ ನಿರೀಕ್ಷಕರು  9449597255, ಹೆಬ್ಬಾಳ ವಲಯ ಅಬಕಾರಿ ನಿರೀಕ್ಷಕರು 9448865163 ಮಲ್ಲೇಶ್ವರಂ ವಲಯ ಅಬಕಾರಿ ನಿರೀಕ್ಷಕರು 9449597257, ಮಹಾಲಕ್ಷ್ಮಿ ಲೇಔಟ್ ವಲಯ ಅಬಕಾರಿ ನಿರೀಕ್ಷಕರು 9449597258 ನಂದಿನ ಲೇಔಟ್ ವಲಯ ಅಬಕಾರಿ ನಿರೀಕ್ಷಕರು 9449597259 ಪೀಣ್ಯ ವಲಯ  ಅಬಕಾರಿ ನಿರೀಕ್ಷಕರು 9449597260 ರಾಜಾಜಿನಗರ ವಲಯ ಅಬಕಾರಿ ನಿರೀಕ್ಷಕರು 9449597261 ಶ್ರೀರಾಂಪುರ ವಲಯ ಅಬಕಾರಿ ನಿರೀಕ್ಷಕರು 8618675107 ಸುಬ್ರಮಣ್ಯನಗರ ವಲಯ ಅಬಕಾರಿ ನಿರೀಕ್ಷಕರು 9449597263 ಟಿ ದಾಸರಹಳ್ಳಿ ವಲಯ ಅಬಕಾರಿ ನಿರೀಕ್ಷಕರು  9449597264 ಯಶವಂತಪುರ ವಲಯ ಅಬಕಾರಿ ನಿರೀಕ್ಷಕರು 9449597265 ಹಾಗೂ ಯಲಹಂಕ ವಲಯ ಅಬಕಾರಿ ನಿರೀಕ್ಷಕರು 9449597266 ನ್ನು ಸಂಪರ್ಕಿಸಿ ಮಾಹಿತಿ / ದೂರು ನೀಡಬಹುದಾಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ (ಉತ್ತರ) ಇವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT