ರಾಜ್ಯ

ಕೊರೋನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರು 14 ದಿನಗಳ ಸರ್ಕಾರದ ನಿರ್ಬಂಧನಕ್ಕೆ

Sumana Upadhyaya

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಕೊರೋನಾ ಸೋಂಕಿತ ರೋಗಿಗಳ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕಡ್ಡಾಯವಾಗಿ ನಿರ್ಬಂಧದಲ್ಲಿಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕಡಿಮೆ ಅಪಾಯದಲ್ಲಿರುವ ರೋಗಿಗಳನ್ನು ಸರ್ಕಾರ ಗುರುತಿಸಿರುವ ಸ್ಥಳಗಳಾದ ಹೊಟೇಲ್ ಗಳು, ಗೆಸ್ಟ್ ಹೌಸ್ ಮತ್ತು ಇತರ ಕೇಂದ್ರಗಳಲ್ಲಿ ನಿರ್ಬಂಧನದಲ್ಲಿಡಲಾಗುತ್ತದೆ. ಅಧಿಕ ಅಪಾಯದಲ್ಲಿರುವ ರೋಗಿಗಳೊಂದಿಗೆ ಸಂಪರ್ಕದಲ್ಲಿದ್ದವರನ್ನು 60 ವರ್ಷಕ್ಕಿಂತ ಮೇಲಿನವರು ಡಯಾಬಿಟಿಸ್, ಅಸ್ತಮಾ, ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಯಲ್ಲಿರುವವರನ್ನು ಸರ್ಕಾರದ ನಿರ್ಬಂಧ ಘಟಕಗಳಿಗೆ ಕಳುಹಿಸಲಾಗುತ್ತದೆ. ಅಧಿಕ ಅಪಾಯ ಮತ್ತು ಕಡಿಮೆ ಅಪಾಯದಲ್ಲಿರುವ ರೋಗಿಗಳನ್ನು 14 ದಿನಗಳು ಕಡ್ಡಾಯವಾಗಿ ನಿರ್ಬಂಧದಲ್ಲಿರಿಸಲಾಗುತ್ತದೆ ಎಂದು ಸರ್ಕಾರದ ಆದೇಶ ತಿಳಿಸಿದೆ.

14 ದಿನಗಳ ನಿರ್ಬಂಧ ಮಾರ್ಗಸೂಚಿಯನ್ನು ಹಲವರು ಉಲ್ಲಂಘಿಸುತ್ತಿದ್ದಾರೆ ಎಂದು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಹೊಸ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ನಗರದ ಆಯ್ದ ಹೊಟೇಲ್ ಗಳು ಮತ್ತು ಗೆಸ್ಟ್ ಹೌಸ್ ಗಳಲ್ಲಿ 50 ಬೆಡ್ ಗಳಿರುತ್ತವೆ. ಇಲ್ಲಿ ವೈದ್ಯರು, ನರ್ಸ್ ಮತ್ತು ಅರೆ ವೈದ್ಯಕೀಯ ಸೇವಾ ಸಿಬ್ಬಂದಿಯಿರುತ್ತಾರೆ, ಒಂದು ಬೆಡ್ ನಿಂದ ಇನ್ನೊಂದಕ್ಕೆ 6 ಅಡಿ ಅಂತರವಿರುತ್ತದೆ.

ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಆಂಬ್ಯುಲೆನ್ಸ್ ಮೂಲಕ ಕಳುಹಿಸಿ ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ವೈದ್ಯರು ಇವರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ಕಳುಹಿಸಬೇಕು.

SCROLL FOR NEXT