ರಾಜ್ಯ

ಲಾಕ್ ಡೌನ್ ಮಧ್ಯೆ ಆನ್ ಲೈನ್ ಮೂಲಕ ವೈದ್ಯರ ಸಮಾಲೋಚನೆ

Sumana Upadhyaya

ಬೆಂಗಳೂರು:ಕೊರೋನಾ ಭೀತಿಯ ಲಾಕ್ ಡೌನ್ ನಡುವೆ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ, ಆತಂಕ ಉಂಟಾಗಿದ್ದು ವೈದ್ಯರನ್ನು ಸಂಪರ್ಕಿಸುವುದು ಹೇಗೆ ಎಂಬ ಪ್ರಶ್ನೆ, ಸಂದೇಹ ಅನೇಕರಲ್ಲಿ ಮೂಡುತ್ತಿದೆ.

ಲಾಕ್ ಡೌನ್ ಮಧ್ಯೆ ಹಲವರು ಆನ್ ಲೈನ್ ಮೂಲಕ ವೈದ್ಯರ ಸಮಾಲೋಚನೆ ಪಡೆಯುತ್ತಿದ್ದಾರೆ. ಇಲ್ಲಿ ರೋಗಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸ್ಕೈಪೆ ಅಥವಾ ಜೂಮ್ ಮೂಲಕ ವೈದ್ಯರಲ್ಲಿ ಸಮಾಲೋಚನೆ ನಡೆಸುತ್ತಾರೆ.

ರೋಗಿಗಳು ಇಲ್ಲಿಗೆ ಬರಲು ಸಂಚಾರ ಸಾರಿಗೆ ಸಮಸ್ಯೆ ಇರುವುದರಿಂದ ಮತ್ತು ಜನರಿಗೆ ಆಸ್ಪತ್ರೆಗೆ ಬರಲು ಭಯವಾಗುವುದರಿಂದ ನಾವು ಈ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯನ್ನು ತಂದಿದ್ದೇವೆ ಎಂದು ಮಣಿಪಾಲ ಆಸ್ಪತ್ರೆಯ ದಿಲೀಪ್ ಜೋಸ್ ಹೇಳುತ್ತಾರೆ.

ಕಳೆದ ಗುರುವಾರ ಮಣಿಪಾಲ ಆಸ್ಪತ್ರೆಯ ವಿವಿಧ ವಿಭಾಗಕ್ಕೆ 50 ಇಂತಹ ಸಮಾಲೋಚನೆಗಳು ಬಂದಿವೆ. ವೈದ್ಯರು ರೋಗಿಗಳ ವೈದ್ಯಕೀಯ ದಾಖಲೆಗಳು ಮತ್ತು ವಿವರಗಳನ್ನು ಕೇಳುತ್ತಾರೆ, ರೋಗಿಗಳು ಮುಖತಃ ಬಂದು ಭೇಟಿ ಮಾಡುವಾಗ ನೀಡುವಷ್ಟೇ ಶುಲ್ಕವನ್ನು ನೀಡಬೇಕಾಗುತ್ತದೆ ಎಂದರು.

ಗರ್ಭಿಣಿಯರಿಗೆ ಅನುಕೂಲವಾಗಲು ಮದರ್ ಹುಡ್ ಆಸ್ಪತ್ರೆ ಟೆಲಿಮೆಡಿಸಿನ್ ತಂತ್ರಜ್ಞಾನವನ್ನು ತಂದಿದ್ದು ಅದರಡಿ ನಿಯಮಿತ ಸಮಾಲೋಚನೆ ಪಡೆಯಬಹುದು. ಸಾಮಾಜಿಕ ಅಂತರ ಎಂಬುದು ಆರೋಗ್ಯ ವಲಯದಲ್ಲಿ ಕೆಲಸ ಮಾಡುವವರಿಗೇ ಸವಾಲಾಗಿ ಪರಿಣಮಿಸಿದ್ದು ರೋಗಿಗಳನ್ನು ಸಂಪರ್ಕಿಸಿ ಪರಿಹಾರ ನೀಡುವುದು ಸವಾಲಾಗಿದೆ ಎಂದು ಮದರ್ ಹುಡ್ ಆಸ್ಪತ್ರೆಯ ಸಿಇಒ ವಿಜಯರತ್ನ ವೆಂಕಟ್ರಾಮ್ ತಿಳಿಸಿದ್ದಾರೆ. ಸ್ತ್ರೀರೋಗ, ಪ್ರಸೂತಿ ಮತ್ತು ಮಕ್ಕಳ ಕಾಯಿಲೆಗೆ ಸದ್ಯ ವಿಡಿಯೊ ಕಾನ್ಫರೆನ್ಸ್ ಮೂಲಕ ಸೇವೆಗಳನ್ನು ನಗರದ ಹಲವು ಪ್ರತಿಷ್ಠಿತ ಆಸ್ಪತ್ರೆಗಳು ನೀಡುತ್ತವೆ.

ದ ವೈಟ್ ಆರ್ಮಿಯ ಸ್ಥಾಪಕ ಡಾ ಕಿಶನ್ ರಾವ್ ಸಣ್ಣಪುಟ್ಟ ಕಾಯಿಲೆಗಳಿಗೆ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆ ಸಹಾಯವಾಣಿ-1800-102-5555/9606457127 ಮದರ್ ಹುಡ್ ಆಸ್ಪತ್ರೆ-1800-108-8008, ಒಂಕೊ.ಕಾಂ-7996579965 ದ ವೈಟ್ ಆರ್ಮಿ ಸಹಾಯವಾಣಿ-8105232787.

SCROLL FOR NEXT