ರಾಜ್ಯ

ಗ್ರೀನ್ ಜೋನ್ ದಾವಣಗೆರೆಯಲ್ಲಿ ಇಂದು ಹೊಸದಾಗಿ 6 ಪ್ರಕರಣ ಪತ್ತೆ, 10ಕ್ಕೇರಿದ ಸೋಂಕಿತರ ಸಂಖ್ಯೆ!

Vishwanath S

ದಾವಣಗೆರೆ: ಗ್ರೀನ್ ಜೋನ್ ಪಟ್ಟಿ ಸೇರಿದ್ದ ದಾವಣಗೆರೆಗೆ ಮತ್ತೆ ಕೊರೋನಾ ವೈರಸ್ ವಕ್ಕರಿಸಿದೆ. ಇಂದು ಹೊಸದಾಗಿ 6 ಪ್ರಕರಣಗಳು ಪತ್ತೆಯಾಗಿದ್ದು ಸೊಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 

ದಾವಣೆಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈ ಸಂಬಂಧ ಮಾಹಿತಿ ನೀಡಿದ್ದು ಜಿಲ್ಲೆಯಲ್ಲಿ ಇಂದು ಹೊಸದಾಗಿ 6 ಪ್ರಕಣಗಲು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

ದಾವಣಗೆರೆ ಜಿಲ್ಲೆಯನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ. ಕಂಟೇಮೆಂಟ್ ಜೋನನ್ ಮಾಡಿದ್ದೇವೆ, ಎಚ್ಚರಿಕೆ ವಹಿಸಿದ್ದೇವೆ. ಸದ್ಯ ಸೋಂಕಿತರ ಅಕ್ಕಪಕ್ಕದ ಮನೆಯವರ ರಕ್ತದ ಮಾದರಿ, ಗಂಟಲು ದ್ರವ ಪಡೆದು ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗಿದೆ ಎಂದರು.

533ನೇ ಸೋಂಕಿತ ಮಹಿಳೆಯ 16 ವರ್ಷದ ಪುತ್ರನಿಗೂ ಸೋಂಕು ತಗುಲಿದೆ. ಇನ್ನು 556ನೇ ಸೋಂಕಿತರ ಸಂಪರ್ಕಕ್ಕೆ ಬಂದ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ರಾಜ್ಯದಲ್ಲಿ ಇಂದು 17 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟಾರೇ ಸೋಂಕಿತರ ಸಂಖ್ಯೆ 582ಕ್ಕೆ ಏರಿಕೆ ಆಗಿದೆ.

SCROLL FOR NEXT