ವೈನ್ ಶಾಪ್- ಸಂಗ್ರಹ ಚಿತ್ರ 
ರಾಜ್ಯ

ಕೊನೆಗೂ ಕುಡುಕರ ಮೊರೆ ಆಲಿಸಿದ ಕೇಂದ್ರ; ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ

ಕೊರೋನಾ ವೈರಸ್ ಲಾಕ್ ಡೌನ್ ಹೇರಿದಾಗಿನಿಂದಲೂ ಬಂದ್ ಆಗಿದ್ದ ಮದ್ಯದಂಗಡಿಗಳ ಬಾಗಿಲು ತೆರೆಯಲು ಕೊನೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹೇರಿದಾಗಿನಿಂದಲೂ ಬಂದ್ ಆಗಿದ್ದ ಮದ್ಯದಂಗಡಿಗಳ ಬಾಗಿಲು ತೆರೆಯಲು ಕೊನೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಹೌದು.. ದೇಶದ ಹಸಿರು ವಲಯಗಳಲ್ಲಿ ಮೇ 4ರಿಂದ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಲಾಕ್ ಡೌನ್ ವಿಸ್ತರಣೆಗೆ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಹಸಿರು ವಲಯಗಳಲ್ಲಿ ಮದ್ಯದಂಗಡಿಗಳು ಮತ್ತು ಪಾನ್ ಅಂಗಡಿಗಳನ್ನು  ತೆರೆಯಬಹುದು ಎಂದು ಸೂಚಿಸಿದೆ. ಆದರೆ, ಮದ್ಯದಂಗಡಿಯಿಂದ ಪಾರ್ಸಲ್ ಕೊಂಡೊಯ್ಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪರಸ್ಪರ ಕನಿಷ್ಠ ಆರು ಅಡಿ ದೂರವನ್ನು ಕಾಪಾಡಬೇಕು. ಅಂಗಡಿಯಲ್ಲಿ ಒಂದೇ ಸಮಯದಲ್ಲಿ ಐದಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಕೇವಲ 5 ಜನ ಮಾತ್ರ  ಒಂದೇ ಬಾರಿಗೆ ಇರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ.

ಪಾನ್ ಅಂಗಡಿಗಳಿಗೂ ಅವಕಾಶ
ಮದ್ಯದಂಗಡಿಗಲು ಮಾತ್ರವಲ್ಲದೇ ಪಾನ್​ ಶಾಪ್​ ತೆರೆಯುವುದಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಳಿದಂತೆ ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ  ಮುಂದುವರಿಯಲಿದೆ. ಹಾಗೆಯೇ, ಶಾಲೆ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಸಿನಿಮಾ ಹಾಲ್, ಮಾಲ್​ಗಳು, ಹೊಟೆಲ್, ರೆಸ್ಟೋರೆಂಟ್​ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ.  ಮೊದಲಿದ್ದ ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ 'ದೊಡ್ಡ ಅವಮಾನ': Donald Trump

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: 31 ಮಂದಿ ಸಾವು

35ರ ಮಹಿಳೆಯೊಂದಿಗೆ 75 ವರ್ಷದ ವೃದ್ಧನ ಮದುವೆ, ಮೊದಲ ರಾತ್ರಿ ಬೆನ್ನಲ್ಲೇ ಸಾವು!

ಉಸಿರಾಟದ ಸಮಸ್ಯೆಯಿಂದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

SCROLL FOR NEXT