ರಾಜ್ಯ

ಕಾರ್ಮಿಕರಿಂದ ದುಪ್ಪಟ್ಟು ದರ ವಸೂಲಿಗೆ ಸರ್ಕಾರ ಬ್ರೇಕ್, ಮೂಲದರದಲ್ಲೇ ಊರಿಗೆ ತೆರಳಲು ಅನುಮತಿ

Raghavendra Adiga

ಬೆಂಗಳುರು: ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನಿಗದಿಯಾದ ಬಸ್ಸುಗಳ ಪ್ರಯಾಣಕ್ಕೆ ದುಪ್ಪಟ್ಟು ದರ ವಿಧಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಸರ್ಕಾರಿ ಬಸ್ಸುಗಳಲ್ಲಿ ಮೂಲದರದೊಂದಿಗೇ ಊರಿಗೆ ತೆರಳಲು ಅನುಮತಿ ನೀಡಿದೆ.

ಈ ಸಂಬಂಧ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ "ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ  ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು‌ ನಿಶಾನೆ ತೋರಿದ್ದಾರೆ." ಎಂದು ಹೇಳೀದ್ದಾರೆ.

ಶನಿವಾರ ತಮ್ಮ ತಮ್ಮ ಊರಿಗಳಿಗೆ ಹೊರಟಿದ್ದ ನೂರಾರು ವಲಸೆ ಕಾರ್ಮಿಕರಿಂದ ಕೆಎಸ್​​ಆರ್​ಟಿಸಿ ಬಸ್ಸುಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿತ್ತು. ಈ ಸಂಬಂಧ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಸಾರಿಗೆ ಸಚಿವ ಲಕ್ಷ್ಮಣ ಸವದಿ ಚರ್ಚೆ ನಡೆಸಿ, ಒಂದೇ ಕಡೆ ಪ್ರಯಾಣಕ್ಕೆ ನಿಗದಿಯಾಗಿರುವ ದರವನ್ನು ಮಾತ್ರ ಪಡೆಯುವಂತೆ ಸಾರಿಗೆ ಸಂಸ್ಥೆಗೆ ಸೂಚಿಸಿದ್ದಾರೆ. ಇದೇ ವೇಳೆ ಇನ್ನೊಂದು ಬದಿಯ ದರವನ್ನು ಕಾರ್ಮಿಕ ಇಲಾಖೆ ಭರಿಸುತ್ತದೆ ಎಂದು ಹೇಳಲಾಗಿದೆ.

ಬಸ್ಸುಗಳಲ್ಲಿ ಪ್ರಯಾಣಿಕರ ನಡುವೆ ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಂಡಿರುವಂತೆಯೂ ಸರ್ಕಾರ ನಿರ್ದೇಶಿಸಿದೆ.
 

SCROLL FOR NEXT