ಬೆಂಗಳೂರು: ಲಾಕ್'ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಒಮ್ಮೆಗೆ ಸಾಗರದಂತೆ ರಸ್ತೆಗಿಳಿಯುವ ಸಾರ್ಜವನಿಕರಿಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ, ಬೆಳಿಗ್ಗೆ 7ಗಂಟೆಯಿಂದ ಸಂಜೆ 7ಗಂಟೆವರೆಗಷ್ಟೇ ಓಡಾಟಕ್ಕೆ ಅನುಮತಿ ನೀಡಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಅನಗತ್ಯವಾಗಿ ಸಾರ್ವಜನಿಕರು ಓಡಾ ನಡೆಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಮುಂದುವರಿಯಲಿದ್ದು, ಜನರು ಸಂಚಾರ ನಿಯಮ ಪಾಲನೆ ಮಾಡಬೇಕು. ಹೆಲ್ಮೆಟ್ ಹಾಗೂ ಅತಿವೇಗದ ಚಾಲನೆ ಸೇರಿದಂತೆ ಸಂಚಾರ ನಿಮಯ ಉಲ್ಲಂಘಿಸಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರ ನೀಡಿರುವ ಲಾಕ್'ಡೌನ್ ವಿನಾಯಿತಿಗಳು ಬಿಬಿಎಂಪಿ ಘೋಷಿಸಿರುವ 22 ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ ಉಳಿದಂತೆ ಅನ್ವಯವಾಗಲಿದೆ. ಈ ಪ್ರದೇಶಗಳಲ್ಲಿ ಚಿನ್ನ ಹಾಗೂ ಬಟ್ಟೆ ಸೇರಿ ಎಲ್ಲಾ ಮಾದರಿ ಮಳಿಗೆಗಳು ಬೆಳಿಗ್ಗೆ 7 ರಿಂದ ರಾತ್ರಿ 7ರವರೆಗೆ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸಂಜೆ 7ರ ಬಳಿಕ ಕರ್ಫ್ಯೂ ಮಾದರಿ ವಾತಾವರಣ ಸೃಷ್ಟಿಯಾಗಲಿದೆ. ಇದರಲ್ಲಿ ವೈದ್ಯಕೀಯ ಸೇರಿದಂತೆ ಅಗತ್ಯ ಸೇವಾವಲಯಗಳಿಗೆ ವಿನಾಯಿತಿ ನೀಡಲಾಗಿದೆ. ನಿರ್ಮಾಣ ಹಂತದ ಕಟ್ಟಡ ಹಾಗೂ ಹತ್ತಿರದ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಕಾರ್ಮಿಕರು ಎಲ್ಲಾ ರೀತಿಯ ಕಟ್ಟಡ ಹಾಗೂ ಕೈಗಾರಿಕೆಗಳಲ್ಲಿ ಕೆಲಸಗಳಲ್ಲಿ ತೊಡಗಬಹುದಾಗಿದೆ.
ರೆಡ್ ಝೋನ್ ನಲ್ಲಿ ಯಾವುದಕ್ಕೆ ಅವಕಾಶವಿದೆ?
ಆರೆಂಜ್ ಝೋನ್ ನಲ್ಲಿ ಯಾವುದಕ್ಕೆ ಅವಕಾಶವಿದೆ?
ರೆಡ್ ಝೋನ್ ನಲ್ಲಿ ಯಾವುದಕ್ಕೆಲ್ಲಾ ಅವಕಾಶವಿದೆಯೋ ಆ ಎಲ್ಲಾ ಚಟುವಟಿಕೆಗಳಿಗೂ ಅವಕಾಶವಿದೆ. ನಾಲ್ಕು ಚಕ್ರದ ವಾಹನದಲ್ಲಿ ಚಾಲಕ ಸೇರಿ ಮೂವರು ಮಾತ್ರ ಪ್ರಯಾಣ ಮಾಡಬಹುದು. ಜಿಲ್ಲೆಗಳ ಒಳಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ಗ್ರೀನ್ ಝೋನ್
ಎಲ್ಲಾ ರೀತಿಯ ಚಟುವಟಿಕೆಗಳಿಗೂ ಅವಕಾಶವಿದೆ. ಆದರೆ, ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದಾಗಿದೆ.