ರಾಜ್ಯ

ಕಾರ್ಮಿಕರನ್ನು ಕಳುಹಿಸಲು ಅನುಕೂಲವಾಗುವಂತೆ ನಾಲ್ಕು ರಾಜ್ಯಗಳಿಗೆ ನೋಡಲ್ ಅಧಿಕಾರಿಗಳ ನೇಮಕ

Raghavendra Adiga

ಬೆಂಗಳೂರು: ಬೆಂಗಳೂರು:  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ಕಾರ್ಮಿಕರು ಕರ್ನಾಟಕದಲ್ಲಿ ಬಾಕಿಯಾಗಿರುವವರನ್ನು ಅವರ ಊರುಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ಈಗಾಗಲೇ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು ಇದೀಗ ಮಹಾರಾಷ್ಟ್ರ, ಗೋವಾ, ರಾಜಸ್ತಾನ ಮತ್ತು ಗುಜರಾತ್‌ ರಾಜ್ಯಗಳ ಜನರ ನೆರವಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.

ಮಹಾರಾಷ್ಟ್ರಕ್ಕೆ ನೋಡಲ್‌ ಅಧಿಕಾರಿಗಳಾಗಿ ನೇಮಿಸಿದ್ದ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ (9036366666) ಮತ್ತು ಐಪಿಎಸ್‌ ಅಧಿಕಾರಿ ಪಾಟೀಲ ವಿನಾಯಕ ವಸಂತರಾವ್‌ (9480800823) ಅವರಿಗೆ ಗೋವಾ ರಾಜ್ಯದ ಹೊಣೆಯನ್ನೂ ನೀಡಲಾಗಿದೆ.

ರಾಜಸ್ಥಾನದ ಹೊಣೆಗಾರಿಕೆ ನೀಡಿದ್ದ ಐಎಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ (9448724992) ಮತ್ತು ಐಪಿಎಸ್‌ ಅಧಿಕಾರಿ ರಾಮನಿವಾಸ್‌ ಸೆಪಟ್‌ (9606041140) ಅವರನ್ನು ಗುಜರಾತ್‌ ರಾಜ್ಯಕ್ಕೂ ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಈ ರಾಜ್ಯಗಳಿಗೆ ತೆರಳುವವರಿಗೆ ಈ ಅಧಿಕಾರಿಗಳು ನೆರವಾಗಲಿದ್ದಾರೆ. ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮತ್ತು ಇತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡುವಂತೆ ಕೂಡಾ ಆದೇಶದಲ್ಲಿ ತಿಳಿಸಲಾಗಿದೆ. ಈ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ಈ ನೋಡಲ್ ಅಧಿಕಾರಿಗಳು ಸರ್ಕಾರ ನೀಡಿರುವ ಮಾರ್ಗಸೂಚಿಯನ್ವಯ ಕೆಲಸ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

SCROLL FOR NEXT