ಸಂಗ್ರಹ ಚಿತ್ರ 
ರಾಜ್ಯ

ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪ್ರಕರಣಕ್ಕೆ ಟ್ವಿಸ್ಟ್; ವೈದ್ಯಕೀಯ ವರದಿ ಅದಲು ಬದಲು?

ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಬೇಗೂರು ಪೊಲೀಸ್ ಠಾಣೆಯ ಪೇದೆಯ ಕೊರೋನಾ ವೈರಸ್ ಪರೀಕ್ಷೆಯ ವರದಿ ಅದಲು ಬದಲಾಗಿದ್ದು, ಹೀಗಾಗಿ ಪಾಸಿಟಿವ್ ಬಂದಿದ್ದ ವರದಿ ನೆಗೆಟಿವ್ ಆಗಿತ್ತು ಎಂದು ಹೇಳಲಾಗಿದೆ. ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಗಂಟಲು  ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕು ಇದಿದ್ದು ಒಬ್ಬರಿಗೆ ಆದರೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೇ 1ರಂದು ಬೇಗೂರು ಠಾಣೆ ಪೊಲೀಸ್ ಪೇದೆಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದೇ ದಿನ ಸುಮಾರು 700ಕ್ಕೂ ಹೆಚ್ಚು ಮಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ. 700 ಮಂದಿಯಲ್ಲಿ ಇಬ್ಬರು ರೋಗಿಗಳ ಹೆಸರು ಒಂದೇ ಆಗಿತ್ತು ಎನ್ನಲಾಗಿದೆ. ಪೊಲೀಸ್ ಪೇದೆ ಕೊವಿಡ್  ಟೆಸ್ಟ್ ಕ್ರಮ ಸಂಖ್ಯೆ 9601, ಕೊರೋನಾ ಪಾಸಿಟಿವ್ ಬಂದ ಕ್ರಮ ಸಂಖ್ಯೆ 10396 ಆಗಿದೆ. ಬೇಗೂರು ಠಾಣೆಗೆ ಆರೋಗ್ಯ ಇಲಾಖೆ ಕಳಿಸಿದ ಕೊವಿಡ್-19 ವರದಿಯಲ್ಲಿ ಪ್ರಕರಣ ಬಯಲಾಗಿದೆ. ಆ ಮೂಲಕ ಬೇಗೂರು ಠಾಣೆಯಲ್ಲಿ ಯಾರಿಗೂ ಕೊರೊನಾ ಇಲ್ಲ ಎಂಬುವುದು ಸಾಬೀತಾಗಿದೆ. 

ಸದ್ಯ ಆಸ್ಪತ್ರೆಗೆ ದಾಖಲಾಗಿದ್ದ ಪೇದೆಗೆ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಈ ವೇಳೆ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಪೇದೆಯ 12 ಜನ ಕುಟುಂಬಸ್ಥರಿಗೂ ನೆಗೆಟಿವ್ ಬಂದಿದೆ. ಪೇದೆ ಸಂಪರ್ಕದಲ್ಲಿದ್ದ ಪೊಲೀಸರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಇಂದು ಸಂಜೆ  ಪೊಲೀಸರ ಕೊವಿಡ್ 19 ರಿಸಲ್ಟ್ ಬರಲಿದೆ ಎನ್ನಲಾಗಿದೆ.  

ಇನ್ನು ಪಾಸಿಟಿವ್ ಬಂದ ವ್ಯಕ್ತಿ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಕೊರೊನಾ ಸೋಂಕಿರುವ ವ್ಯಕ್ತಿಯ ಫೋನ್ ಕನೆಕ್ಟ್ ಆಗಿಲ್ಲ. ಅಸಲಿ ಕೊರೊನಾ ಸೋಂಕಿತ ವ್ಯಕ್ತಿ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಆತ ಯಾರೆಂದು ಪತ್ತೆಯಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ