ರಾಜ್ಯ

ವೇತನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೆಎಸ್ ಆರ್ ಟಿಸಿ ನೌಕರರ ಮನವಿ

Shilpa D

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟವು ತನ್ನ ಉದ್ಯೋಗಿಗಳಿಗೆ ಸಂಬಳ ನೀಡುವಂತೆ ಕೋರಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಮಾರ್ಚ್ 3 ರಿಂದ ಮೇ 4ರ ವರೆಗೆ 469 ಕೋಟಿ ರು. ನಷ್ಟವಾಗಿದ್ದು, ಈ ಸಂಬಂಧ ಸಿಎಂ ಜೊತೆ ಸಭೆ ನಡೆಸಿದ್ದರು. ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಕೇವಲ 160 ಕೋಟಿ ರೂ. ಮಾತ್ರ ನೀಡಿದ್ದು, ಅದು ಆ ಹಣ ಸಾಕಾಗುವುದಿಲ್ಲ ಎಂದು ಹೇಳಿದೆ.

ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ವೇತನ ನೀಡಲು 330 ಕೋಟಿ ರು ಅವಶ್ಯಕತೆಯಿದೆ ಎಂದು ಎಐಟಿಯುಸಿ ಮುಖ್ಯ ಕಾರ್ಯದರ್ಶಿ ಡಿ ಎ ವಿಜಯ ಭಾಸ್ಕರ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಏಪ್ರಿಲ್ ವೇತನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಹೇಳಲಾಗಿದೆ.
 

SCROLL FOR NEXT