ಆರೋಪಿ ಪ್ರಭು ಹಾಗೂ ಪೋಲೀಸ್ ಅಧಿಕಾರಿ ಶ್ರೀಕಂಠೇಗೌಡ 
ರಾಜ್ಯ

ಬೆಂಗಳೂರು: ಸ್ನೇಹಿತನ ಹತ್ಯೆ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಕಾಲಿಗೆ ಗುಂಡೇಟು

ಪಾನಮತ್ತನಾಗಿದ್ದ ವೇಳೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ ನಡೆಸಿದವನ ಮೇಲೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕೊಲೆ ಆರೋಪಿಯಾದ ಪ್ರಭು ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಪಾನಮತ್ತನಾಗಿದ್ದ ವೇಳೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ ನಡೆಸಿದವನ ಮೇಲೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕೊಲೆ ಆರೋಪಿಯಾದ ಪ್ರಭು ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೋಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಗಿನ ಜಾವ ನಡೆದ ಘಟನೆಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಭು ಬಂಧಿಸಲ್ಪಟ್ಟಿದ್ದಾನೆ. 

ಪ್ರಭು ಕರಣ್ ಸಿಂಗ್ ಎಂಬಾತನನ್ನು  ಮೇ 4 ರಂದು ಪಬ್ ಜಿ ಆಡುವ ವೇಳೆ ಅಡ್ಡಿಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದನು.ಘಟನೆಯ ದೃಶ್ಯಾವಳಿಗಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಯ ಜಾಡು ಹಿಡಿದು ಬಂಧಿಸಲು ಪೋಲೀಸರು ಕಾರ್ಯಪ್ರವೃತ್ತರಾಗಿದ್ದರು.

ಆರೋಪಿ ಪ್ರಭು ಸಾಸಿವೆಘಟ್ಟದಲ್ಲಿ ಆಚಾರ್ಯ ಕಾಲೇಜ್ ಬಳಿ ಇರುವ ಕುರಿತು ಮಾಹಿತಿ ಪಡೆದ ಪೋಲೀಸರು  ಆತನ ಬಂಧನಕ್ಕೆ ತೆರಳಿದ್ದಾರೆ. ಆಗ ಆರೋಪಿ ಹೆಡ್‌ಕಾನ್‌ಸ್ಟೆಬಲ್ ಹನುಮಂತೇಗೌಡ  ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಅದಾಗ ಪೋಲೀಸ್ ಅಧಿಕಾರಿ ಬಾಗಲಗುಂಟೆಯ ಸಬ್ ಇನ್‍ಸ್ಪೆಕ್ಟರ್ ಶ್ರೀಕಂಠೇಗೌಡ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಆರೋಪಿ ಪ್ರಭುವನ್ನು ಬಂಧಿಸಿದ್ದು ಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೀಡಾದ ಹನುಮೇಗೌಡ  ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್-Video

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ-Video

ಯೊಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಿಗ್ ರಿಲೀಫ್: ಶಾಸಕ ವಿನಯ್‌ ಕುಲಕರ್ಣಿಗೆ 'ಸುಪ್ರೀಂ' ಜಾಮೀನು!

ಹೈಕಮಾಂಡ್‌ ಮೌನ ವಹಿಸಿದಷ್ಟು ಹಾನಿ ಅಧಿಕ (ನೇರ ನೋಟ)

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

SCROLL FOR NEXT