ರಾಜ್ಯ

ಕೋವಿಡ್-19 ಫಲಿತಾಂಶದಲ್ಲಿ ಗೊಂದಲ: ಗರ್ಭಿಣಿ ಮಹಿಳೆ, ಇಬ್ಬರು ಪೊಲೀಸರ ಮಾದರಿ ಮರು ಪರೀಕ್ಷೆ!

Nagaraja AB

ಬೆಂಗಳೂರು: ಖಾಸಗಿ ಪ್ರಯೋಗಾಲಯದಲ್ಲಿ ಮೊದಲಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತದನಂತರದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ

ಈ ಗೊಂದಲದಿಂದಾಗಿ  ಕೋವಿಡ್-19 ವಾರ್ಡ್ ನಿಂದ ಆ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಈಗಲೂ ಕೂಡಾ ಖಾಸಗಿ ಆಸ್ಪತ್ರೆಯೊಂದರ ಐಸೋಲೇಷನ್ ನಲ್ಲಿ ನಿಗಾದಲ್ಲಿ ಇರಿಸಲಾಗಿದೆ. 

ಮತ್ತೊಂದು ಪ್ರಕರಣದಲ್ಲಿ ಕೋವಿಡ್ -19 ಪರೀಕ್ಷೆಗಾಗಿ ಜಯನಗರ ಜನರಲ್ ಆಸ್ಪತ್ರೆಗೆ ತೆರಳಿದ್ದ  ಬೇಗೂರು ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ತಮ್ಮ ವಿವರಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಇಬ್ಬರ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇಬ್ಬರ ಹೆಸರು ಮತ್ತು ವಿಳಾಸ ಒಂದೇ ಆಗಿದೆ. 

ಮೇ 4 ರಂದು ನಿಮ್ಹಾನ್ಸ್ ಟೆಸ್ಟಿಂಗ್ ಲ್ಯಾಬ್ ನಿಂದ ಪಾಸಿಟಿವ್ ವರದಿಯೊಂದು ಬಂದಿದೆ. ಮತ್ತೊಂದರಲ್ಲಿ ನೆಗೆಟಿವ್ ವರದಿ ಬಂದಿದೆ. 

ಒಂದೇ ಹೆಸರನ್ನು ಎರಡು ಬಾರಿ ನಮೂದಿಸಿದ ಕಾರಣ ಪಾಸಿಟಿವ್ ಬಂದಿದ್ದ ರೋಗಿ ಬಗ್ಗೆ ಗೊಂದಲ ಉಂಟಾಗಿದೆ. ಆದಾಗ್ಯೂ, ಇಬ್ಬರಿಂದ ಹೊಸದಾಗಿ ಪಡೆದ ಮಾದರಿಗಳ ದೃಢೀಕರಣ ಪರೀಕ್ಷೆಗಾಗಿ ಕಳುಹಿಸಲಾಗಿದೆ ಲ್ಯಾಬ್ ನಿಂದ ಅಂತಿಮ ವರದಿ ಬಂದ ನಂತರ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುವುದು, ಇದೀಗ ಇಬ್ಬರನ್ನು ಐಸೋಲೇಷನ್ ನಲ್ಲಿಡಲಾಗಿದೆ. ಈ ಗೊಂದಲಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು  ಅಧಿಕಾರಿಗಳು ತಿಳಿಸಿದ್ದಾರೆ. 

ಗರ್ಭೀಣಿ ಮಹಿಳೆ ಮತ್ತು ಇಬ್ಬರು ಪೊಲೀಸರ ಮೂರನೇ ಮಾದರಿಯನ್ನು ಟೆಸ್ಟಿಂಗ್ ಗಾಗಿ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ. 

SCROLL FOR NEXT