ರಾಜ್ಯ

ವಾಪಸ್ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿಗೆ ಜಪಾನ್ ಕನ್ನಡಿಗರ ಮನವಿ

Shilpa D

ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಪಾನ್ ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ವಾಪಸ್ ಕರೆಸಿಕೊಳ್ಳಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ,

ಜಪಾನ್ ನಲ್ಲಿ ಒಟ್ಟು 220 ಮಂದಿ ಭಾರತೀಯರು ಸಿಲುಕಿದ್ದು ಅದರಲ್ಲಿ ಕನ್ನಡಿಗರು ಸಹ ಸೇರಿದ್ದಾರೆ. ಬೇರೆ ರಾಜ್ಯಗಳು ಹೊರದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆಸಿಕೊಂಡಿವೆ, ಅದರಂತೆಯೇ ಕನ್ನಡಿಗರನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸದ್ಯ ಟೋಕಿಯೋದಲ್ಲಿ ಸಿಲುಕಿರುವ ಬೆಂಗಳೂರಿನ ಕೀರ್ತನ್ ಶಶಿಧರ್ ಎಂ ಸಿಎಂ ಕಚೇರಿಗೆ ಮೇಲ್ ಕಳುಹಿಸಿದ್ದಾರೆ. ಜಪಾನ್ ನಲ್ಲಿ ಒಟ್ಟು 220 ಮಂದಿ ಭಾರತೀಯರಿದ್ದು ಅದರಲ್ಲಿ 20 ಕನ್ನಡಿಗರು ಸೇರಿದ್ದಾರೆ, ಅವರನ್ನೆಲ್ಲಾ ವಾಪಸ್ ಕರೆಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಲು ನಿಮ್ಮ ಸಹಾಯ ಅಗತ್ಯವಿದೆ, ನೀವು ಕೂಡ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಜಪಾನ್ ನಿಂದ ಸ್ಥಳಾಂತರಗೊಂಡ ಮೊದಲ ಹಂತದ ಭಾರತೀಯರಲ್ಲಿ ಕನ್ನಡಿರಾರು ಇರಲಿಲ್ಲ, ಹೀಗಾಗಿ ಇನ್ನೊಂದು ಹಂತದಲ್ಲಿ ನಮ್ಮನ್ನು ಕರೆದೊಯ್ಯಬೇಕು ಎಂದು ಹೇಳಿದ್ದಾರೆ.

ಜಪಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿ ಸಿಲುಕಿರುವ ಎಲ್ಲಾ ಭಾರತೀಯರ ಮಾಹಿತಿ ಪಡೆಯುತ್ತಿದ್ದು, ಶೀಘ್ರವೇ ವಾಪಸ್ ಕರೆಸಿಕೊಳ್ಳುವುದಾಗಿ ತಿಳಿಸಿದ್ದಾರೆ.
 

SCROLL FOR NEXT