ರಾಜ್ಯ

ಸ್ಪಿರುಲಿನಾ ಚಿಕ್ಕಿಗಳು ಕೋವಿಡ್-19ಗೆ ಔಷಧಿಯಲ್ಲ: ಕೆಲ ಮಾಧ್ಯಮಗಳ ವರದಿ ಸುಳ್ಳು- ಸಿಎಫ್ ಟಿಆರ್ ಐ ಸ್ಪಷ್ಟನೆ

Nagaraja AB

ಬೆಂಗಳೂರು: ಸ್ಪಿರುಲಿನಾ ಚಿಕ್ಕಿ ತಿಂದರೆ ಕೋವಿಡ್ 19 ಸೋಂಕು ನಿವಾರಣೆಗೆ ಸಹಕಾರಿಯಾಗುತ್ತದೆ. ಸೋಂಕು ನಿಯಂತ್ರಣದಲ್ಲಿ ಇದು ರಾಮಬಾಣ ಎಂಬ ವರದಿಗಳನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆ -ಸಿ.ಎಫ್.ಟಿ.ಆರ್.ಐ ಅಲ್ಲಗಳೆದಿದೆ. 

ಈ ಬಗ್ಗೆ ಸಿ.ಎಫ್.ಟಿ.ಆರ್.ಐ ನಿರ್ದೇಶಕರು ಹೇಳಿಕೆ ನೀಡಿದ್ದು, ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಸ್ಪಿರುಲಿನಾ ಚಿಕ್ಕಿಗಳು ಕೋವಿಡ್ – ೧೯ಗೆ ರಾಮಬಾಣ ಎಂದು ವರದಿ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆ ನಿರ್ದೇಶಕ ಡಾ . ಎಸ್ ಎಂ . ಎಸ್ . ರಾಘವರಾವ್ ಅವರು, ಅಭಿವೃದ್ಧಿಪಡಿಸಿದ  ಸ್ಪಿರುಲಿನಾ ಚಿಕ್ಕಿಗಳಾಗಲಿ ಅಥವಾ ಸರಬರಾಜು ಮಾಡಿದ ಇತರೆ ಉತ್ಪನ್ನಗಳಲ್ಲಿ 
ಯಾವುದೇ ರೋಗ ಇಲ್ಲವೇ ಖಾಯಿಲೆಗೆ ಅನುಕೂಲಕರ ಎಂದು ಸಿಎಫ್ ಆರ್ ಟಿಐ ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. 

ಸ್ಪಿರುಲಿನಾ ಚಿಕ್ಕಿಗಳು ರೋಗಪ್ರತಿರೋಧವನ್ನು ಹೆಚ್ಚಿಸಲು ಬಳಸಬಹುದಾದ ಪೂರಕ ಆಹಾರಗಳು ಹಾಗೂ ಮಕ್ಕಳಲ್ಲಿ ಕಾಣುವ ನ್ಯೂನತೆ ಪೋಷಣೆಯನ್ನು ಸುಧಾರಿಸಲೆಂದು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್-19ಕ್ಕೆ ಚಿಕಿತ್ಸೆಗಾಗಿ ಅಭಿವೃದ್ಧಿ ಪಡಿಸಿದ್ದಲ್ಲ ಎಂದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಸಮನ್ವಯಕ ಎ.ಎಸ್.ಕೆ.ವಿ.ಎಸ್.ಶರ್ಮಾ ಸ್ಪಷ್ಟಪಡಿಸಿದ್ದಾರೆ.

SCROLL FOR NEXT