ರಾಜ್ಯ

ಚೀನಾ ದೇಶದಿಂದ ಹೊರ ಬರುವ ಕಂಪೆನಿಗಳನ್ನು ಸೆಳೆಯಲು ಕಾರ್ಯಪಡೆ ರಚನೆ

Nagaraja AB

ಬೆಂಗಳೂರು: ಚೀನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ದೃಷ್ಟಿಯಿಂದ ರಾಜ್ಯ ಸರಕಾರ ವಿಶೇಷ ಹೂಡಿಕೆ ಪ್ರೋತ್ಸಾಹ ಕಾರ್ಯಪಡೆಯನ್ನು ರಚಿಸಿದೆ

ಕೊರೊನಾ ಜನಕ ಚೀನಾ ದೇಶದಿಂದ ಈಗಾಗಲೇ ಹಲವು ಕಂಪೆನಿಗಳು ಹೊರಬರಲು ಮುಂದಾಗಿವೆ. ಈ ಸಂಬಂಧ ಹಲವು ಕಂಪೆನಿಗಳು ತಮ್ಮ ಇಂಗಿತ ವ್ಯಕ್ತಪಡಿಸಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಜ್ಯ ಸರ್ಕಾರ ಚೀನಾದಿಂದ ಹೊರಬರುವ ಕಂಪೆನಿಗಳನ್ನು ರಾಜ್ಯಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಿದೆ

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇತ್ತೀಚೆಗೆ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಾಗಿತ್ತು. ಅದರಂತೆ ಇದೀಗ ಸ್ಷೆಷಲ್ ಇನ್ವೆಸ್ಟ್ ಮೆಂಟ್ ಪ್ರೊಮೋಷನ್ ಟಾಸ್ಕ್ ಫೋರ್ಸ್ ರಚಿಸಿ ಅದೇಶ ಹೊರಡಿಸಲಾಗಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಟಾಸ್ಕ್ ಫೋರ್ಸ್ ಇರಲಿದೆ. ಒಟ್ಟು 15 ಸದಸ್ಯರ ಈ ಟಾಸ್ಕ್ ಫೋರ್ಸ್ ನಲ್ಲಿ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಇರಲಿದ್ದಾರೆ.‌ ಜೊತೆಗೆ ಕರ್ನಾಟಕದಲ್ಲಿನ ಅಮೇರಿಕಾ, ಕೊರಿಯಾ, ತೈವಾನ್, ಫ್ರಾನ್ಸ್ ಹಾಗೂ ಜರ್ಮನಿ ಕಂಪೆನಿಗಳ ಪ್ರತಿನಿಧಿಗಳು ಕಾರ್ಯಪಡೆಯಲ್ಲಿ ಇರಲಿದ್ದಾರೆ.

ಕಾರ್ಯಪಡೆಯ ಹೊಣೆಗಾರಿಕೆಗಳು: ಕೊರೋನಾ ನಂತರ ಸ್ಥಳಾಂತರಗೊಳ್ಳುವ ಸಂಸ್ಥೆಗಳನ್ನು ಕರ್ನಾಟಕಕ್ಕೆ ಸೆಳೆಯುವುದು, ಹೂಡಿಕೆ ಸೆಳೆಯಲು ವಿಶೇಷ ಪ್ಯಾಕೇಜ್ ಗಳ ರಚನೆ, ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಫಾಸ್ಟ್ ಟ್ರಾಕ್ ಕ್ಲಿಯರೆನ್ಸ್ ಗೆ ಕ್ರಮ ತೆಗೆದುಕೊಳ್ಳುವುದು, ಕರ್ನಾಟಕ ಉತ್ತಮ ಹೂಡಿಕೆ ರಾಜ್ಯ ಎಂಬ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿದೆ.

SCROLL FOR NEXT