ರಾಜ್ಯ

ಕೊರೋನಾ ಲಾಕ್ ಡೌನ್: ಕರ್ನಾಟಕದ ವಲಸೆ ಕಾರ್ಮಿಕರಿಗೆ ಗಡಿಯಲ್ಲಿ ಅಡಚಣೆ

Shilpa D

ಕಲಬುರಗಿ: ನಮ್ಮ ಮನೆಗಳಿಗೆ ಹಿಂತಿರುಗಲು ದಾಖಲೆಗಳು ಮತ್ತು ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೆ, ದಯವಿಟ್ಟು ನಮ್ಮ ಕೈಯಲ್ಲಿರುವ ಮುದ್ರೆಯನ್ನು ಅಳಿಸಿಹಾಕಿ ಮತ್ತು ದಾಖಲೆಗಳನ್ನು ಹಿಂತಿರುಗಿಸಿ, ಸಂತೋಷವಾಗಿ ನಾವು ವಾಪಸ್ ಮುಂಬೈಗೆ ಹೋಗುತ್ತೇವೆ ಎಂದು ವಲಸಿಗ ದಂಪತಿ ಕರ್ನಾಟಕದ ಗಡಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ವಲಸೆ ಕಾರ್ಮಿಕರನ್ನು ಗಡಿಯಲ್ಲಿ ತಡೆದು ಅವರ ದಾಖಲಾತಿ ಮೊದಲಾದ ಮಾಹಿತಿಗಳನ್ನು ಚೆಕ್ ಪೋಸ್ಟ್ ನಲ್ಲಿ ಕಲೆ ಹಾಕುತ್ತಿದ್ದಾರೆ. ಮುಂಬೈ ಮತ್ತು ಪುಣೆಯಿಂದ ಆಗಮಿಸಿರುವ ವಲಸೆ ಕಾರ್ಮಿಕರನ್ನು  ಕಳುಹಿಸಲು ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ದಾಖಲೆ ಪರಿಶೀಲಿಸಲಾಯಿತು.

ಸೇವಾ ಸಿಂಧು ಆ್ಯಪ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಲು ಸಿಬ್ಬಂದಿ ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಂತಹ 3 ಸಾವಿರ ಕಾರ್ಮಿಕರು ಗಡಿಗೆ ಬಂದಿದ್ದು, ಮನೆಗೆ ಮರಳಲು ಹಂಬಲಿಸುತ್ತಿದ್ದಾರೆ.

ಮಹಾರಾಷ್ಟ್ರ ಪುಣೆಯಿಂದ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ವಾಪಸ್ ಬರುತ್ತಿರುವ ವಲಸೆ ಕಾರ್ಮಿಕರನ್ನು  ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ  ಅಧಿಕಾರಿಗಳು ಮತ್ತು ಬಸ್ ಗಳ ಕೊರತೆಯಿಂದಾಗಿ ವಲಸೆ ಕಾರ್ಮಿಕರು ಶೀಘ್ರವಾಗಿ ತಮ್ಮ ತಮ್ಮ  ಮನೆಗಳಿಗೆ ತೆರಳಲು
ಸಾಧ್ಯವಾಗುತ್ತಿಲ್ಲ,

ಲಾಕ್ ಡೌನ್ ಆರಂಭವಾದಾಗಿನಿಂದ ಊಟಕ್ಕೆ ಪರದಾಡುತ್ತಿರುವ ಈವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಹಂಬಲಿಸುತ್ತಿದ್ದಾರೆ, ಆದರೆ ಗಡಿಯಲ್ಲಿನ ಕೆಲವು ತೊಂದರೆಗಳಿಂದಾಗಿ  ಸಾಧ್ಯವಾಗುತ್ತಿಲ್ಲ. 

SCROLL FOR NEXT