ಸಾಂದರ್ಭಿಕ ಚಿತ್ರ 
ರಾಜ್ಯ

ಕೊಪ್ಪಳ: ಬಡವರ ಅನ್ನಭಾಗ್ಯಕ್ಕೆ ಕನ್ನ, ಅಕ್ಕಿ ಕಾಳಸಂತೆಯಲ್ಲಿ ಮಾರಾಟ!

ರಾಜ್ಯದ ಯಾವೊಬ್ಬ ಬಡವನು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕೊಪ್ಪಳ: ರಾಜ್ಯದ ಯಾವೊಬ್ಬ ಬಡವನು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: ಮೇ 6ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಗದಗ ನಗರ ಠಾಣೆ ಪೊಲೀಸರು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿಯೊಂದನ್ನು ಕಳಸಾಪುರ ರಿಂಗ್ ರಸ್ತೆಯಲ್ಲಿ ತಡೆಯುತ್ತಾರೆ. ಲಾರಿ ಚಾಲಕ ಸೋಮಲಿಂಗಪ್ಪ ಶಿರೂರನ್ನು ವಿಚಾರಿಸಿದಾಗ ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ಕಿರಣ್ ಟ್ರೇಡರ್ಸ್‌ನಿಂದ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್‌ಗೆ ಸುಮಾರು 600 ಚೀಲ (ಚೀಲವೊಂದರಲ್ಲಿ 50 ಕೆಜಿ ಅಕ್ಕಿ) ಅಂದರೆ 7.35 ಲಕ್ಷ ರೂಪಾಯಿ ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ಸಾಗಿಸುತ್ತಿರುವುದು ಬಯಲಿಗೆ ಬಂದಿದೆ. ಈ ಕುರಿತು ವಿಚಾರಣೆ ನೆಪದಲ್ಲಿ ಪ್ರಕರಣ ದಾಖಲಿಸಲು ವಿಳಂಬ ಮಾಡಿರುವ ಪೊಲೀಸ್ ಅಧಿಕಾರಿಗಳು ಸಂಜೆ ಹೊತ್ತಿಗೆ ಲಾರಿ ಚಾಲಕ ಸೋಮಲಿಂಗಪ್ಪ ಶಿರೂರು ಹಾಗೂ ಕೊಪ್ಪಳದ ಕಿರಣ್ ಟ್ರೇಡರ್ಸ್‌ನ ಅಬ್ದುಲ್ ರೆಹಮಾನ್ ಮುನ್ಷಿಯನ್ನು ನ್ಯಾಯಾಂಗದ ವಶಕ್ಕೆ ನೀಡಿ ಎಫ್ಐಆರ್ ದಾಖಲಿಸಿದ್ದಾರೆ.

ಅಧಿಕಾರಿಗಳ ಮೇಲೆ ಅನುಮಾನ:ಇಷ್ಟು ದೊಡ್ಡ ಮೊತ್ತದ ಅಕ್ಕಿಯನ್ನು ಅಧಿಕಾರಿಗಳ ಸಹಕಾರವಿಲ್ಲದೇ ಪಡಿತರ ಕೇಂದ್ರದಿಂದಾಗಲೀ ಅಥವಾ   ಭಾರತೀಯ ಆಹಾರ ನಿಗಮದ ಗೋಡೌನ್‌ನಿಂದ ಖಾಸಗಿ ವ್ಯಕ್ತಿಗಳ ಗೋಡೌನ್‌ಗೆ ಸಾಗಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ.

ಇದರಲ್ಲಿ ಪೊಲೀಸರು ಶಾಮೀಲಾದರೆ ಕಾಟಾಚಾರದ ತನಿಖೆ ನಡೆಸಿ ಚಾರ್ಜ್‌ಶೀಟ್‌ನಲ್ಲಿ (ದೋಷಾರೋಪಣೆ ಪಟ್ಟಿಯಲ್ಲಿ) ಖುಲಾಸೆಯಾಗಲು ಸಹಕಾರಿಯಾಗುವ ಅಂಶಗಳನ್ನು ಸೇರಿಸಿ ಬಡವರ ಅನ್ನ ಕಸಿದು ಮಾರಾಟ ಮಾಡುವವರನ್ನು ರಾಜಾರೋಷವಾಗಿ ನಿರ್ದೋಷಿಪಟ್ಟ ಕಟ್ಟಬಹುದು.

ಪೊಲೀಸರ ಮೇಲೂ ಗುಮಾನಿ: ಈ ಪ್ರಕರಣದಲ್ಲಿ ಪೊಲೀಸರ ಮೇಲೂ ಗುಮಾನಿ ಶುರುವಾಗಿದೆ. ಯಾಕೆಂದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್‌ನಲ್ಲಿ ಕೊಪ್ಪಳದ ಕಿರಣ್ ಟ್ರೇಡರ್ಸ್ ಹೆಸರಿದೆ. ಆದರೆ ಎಲ್ಲೂ ಸಹ ಹುಬ್ಬಳ್ಳಿಯ ಬಾಲಾಜಿ ಟ್ರೇಡರ್ಸ್ ಹೆಸರಿಲ್ಲ. ಬಡವರ ಅನ್ನಭಾಗ್ಯವನ್ನ ಕಸಿದುಕೊಂಡದ್ದು ಎಷ್ಟು ಅಪರಾಧವೊ ಅದನ್ನ ಖರೀದಿಸುವುದು ಸಹ ಅಷ್ಟೇ ಅಪರಾಧ ಎನ್ನುವ ಅಂಶವನ್ನು ಪೊಲೀಸರು ಮರೆತಂತಿದೆ. ಅಥವಾ ಉದ್ದೇಶಪೂರ್ವಕವಾಗಿ ಹುಬ್ಬಳ್ಳಿಯ ಬಾಲಾಜಿ  ಟ್ರೇಡರ್ಸ್‌ನ ಹೆಸರನ್ನ ಮರೆ ಮಾಚಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ಪ್ರಶ್ನಿಸಿದರೆ ಎಲ್ಲವನ್ನೂ ಎಫ್ಐಆರ್‌ನಲ್ಲೇ ದಾಖಲಿಸಬೇಕು ಅಂತೇನಿಲ್ಲ‌. ಎಫ್ಐಆರ್ ದಾಖಲಾದ 90 ದಿನಗಳೊಳಗೆ ಚಾರ್ಜ್ ಶೀಟ್‌ನ್ನು ಕೋರ್ಟ್‌ಗೆ ಸಲ್ಲಿಸಬೇಕು. ಆ ದೋಷಾರೋಪಣೆ ಪಟ್ಟಿಯಲ್ಲಿ ಎಲ್ಲ ಅಂಶಗಳನ್ನು ದಾಖಲಿಸುತ್ತೇವೆ ಎನ್ನುವ ಜಾಣ್ಮೆ ಉತ್ತರ ಪೊಲೀಸ್ ಇಲಾಖೆಯದ್ದು.

ವರದಿ: ಬಸವರಾಜ ಕರುಗಲ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT