ರಾಜ್ಯ

ಗ್ರೀನ್ ಜೋನ್ ಯಾದಗಿರಿಗೂ ಕಾಲಿಟ್ಟ ಡೆಡ್ಲಿ ವೈರಸ್: ಇಬ್ಬರಲ್ಲಿ ಸೋಂಕು ಪತ್ತೆ

Shilpa D

ಯಾದಗಿರಿ: ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಗೂ ಡೆಡ್ಲಿ ವೈರಸ್ ಕೊರೋನಾ ಕಾಲಿಟ್ಟಿದ್ದು, ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಅಹಮದಾಬಾದ್ ನಿಂದ ಸುರಪುರಕ್ಕೆ ಮೂವರು ಬಂದಿದ್ದರು, ಇದರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. 

ಸೋಂಕಿತರ ಜೊತೆ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬಂದಿರುವವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಬೇಕೆಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
 

SCROLL FOR NEXT