ರಾಜ್ಯ

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೆ ಸರ್ಕಾರ ಆದೇಶ

Srinivasamurthy VN

ಬೆಂಗಳೂರು: ಅತಿಥಿ ಉಪನ್ಯಾಸಕಿಯ ಮೂರು ತಿಂಗಳ ವೇತನವನ್ನು ಬಿಡುಗಡೆಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ. 

ಶಾಸಕ ಹಾಲಪ್ಪ ಅವರು ಖಾಸಗಿ ವಾಹಿನಿಯೊಂದರಲ್ಲಿ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರು ತನ್ನ ನೋವನ್ನು ತೋಡಿಕೊಂಡಿದ್ದರು. ಅವರ ಬೇಡಿಕೆಯಂತೆ ಭರವಸೆ ಕೊಟ್ಟ 3 ತಾಸಿನೊಳಗೆ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆಗೆ  ಆದೇಶಹೊರಡಿಸಿದೆ. ಸಾಗರ ಶಾಸಕ ಹರತಾಳು ಹಾಲಪ್ಪ ಸರ್ಕಾರದ ಮೇಲೆ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಉಳಿಕೆ ಮೊತ್ತ, ಪ್ರಸಕ್ತ ವರ್ಷದ ಮೂರು ತಿಂಗಳ ವೇತನವನ್ನು ಬಿಡುಗಡೆಗೊಳಿಸಲಾಗಿದೆ. 

ಎಲ್ಲ ಪಾಂಶುಪಾಲರು ಇದೇ 14 ರೊಳಗೆ ಬಿಲ್ ಗಳನ್ನು ಸಿದ್ಧಪಡಿಸಿ ಖಜಾನೆಗೆ ಸಲ್ಲಿಸಬೇಕು. ಈ ಪ್ರಕ್ರಿಯೆಯನ್ನು ಸಂಬಂಧಪಟ್ಟ ಜಂಟಿ ನಿರ್ದೇಶಕರು ಕೈಗೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಫೋನ್‌ ಇನ್ ಕಾರ್ಯಕ್ರಮದಲ್ಲಿ, ಸಾಗರದ ಪದವಿ ಕಾಲೇಜಿನಲ್ಲಿ ಅತಿಥಿ  ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಸೌಜನ್ಯ ಎಂಬುವವರು ಕರೆ ಮಾಡಿ ತಮಗೆ 3 ತಿಂಗಳಿನಿಂದ ವೇತನ ಬಂದಿಲ್ಲ ಎಂದು ಹಾಲಪ್ಪ ಅವರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್  ನಾರಾಯಣ ಅವರ ಬಳಿ ಚರ್ಚಿಸಿ ವೇತನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು.

ವೇತನ ಬಿಡುಗಡೆ ಗೊಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಕಾಲೇಜು ಪ್ರಾಂಶುಪಾಲರಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ಬಂದಿದೆ. ಶಾಸಕರ ಈ ಕಾರ್ಯದಿಂದ ರಾಜ್ಯದ ಎಲ್ಲಾ ಭಾಗದ ಅತಿಥಿ ಶಿಕ್ಷಕರ ವೇತನ ಸಮಸ್ಯೆ ಬಗೆಹರಿದಂತಾಗಿದೆ.

SCROLL FOR NEXT