ರಾಜ್ಯ

ಮುಸ್ಲಿಂ ಸಮುದಾಯದ ಬಗ್ಗೆ ಸಿಎಂ ಇಬ್ರಾಹಿಂಗೆ ಕಾಳಜಿ ಇಲ್ಲ: ಸಿಟಿ ರವಿ ಟೀಕೆ

Vishwanath S

ಬೆಂಗಳೂರು: ರಂಜಾನ್ ಸಮಯದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂಬ ಸಿಎಂ ಇಬ್ರಾಹಿಂ ಮನವಿಗೆ ಪ್ರತಿಕ್ರಿಯಿಸುವ ಪ್ರವಾಸೋದ್ಯಮ ಸಚಿವ ಸಿಟಿ ರವಿ, ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ರೆ ಈ ರೀತಿ ಪತ್ರ ಬರೆಯುತ್ತಿರಲಿಲ್ಲ ಎಂದಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಜಾಮುದ್ದೀನ್ ಹಾವಳಿಗೆ ದೇಶ ಎರಡು ತಿಂಗಳು ತತ್ತರಿಸಿದೆ. ಮತ್ತೆ ಅವಕಾಶ ಕೊಟ್ಟು ಅಪಾಯ ಮೈಮೇಲೆಳೆದುಕೊಳ್ಳಬೇಕೆ? ನೀವು  ನಿಮ್ಮ‌ಪತ್ರವನ್ನ ವಾಪಸ್ ಪಡೆದರೆ ಉತ್ತಮ. ಆಗ ನಿಮ್ಮ ಬಗ್ಗೆ ನಿಮ್ಮ‌ಸಮುದಾಯಕ್ಕೆ ಒಳ್ಳೆಯ ಭಾವನೆ ಬರಬಹುದು. ಇಲ್ಲವೇ ನಿಮ್ಮ‌ ಸಮುದಾಯದವರೇ ನಿಮಗೆ ಛೀಮಾರಿ ಹಾಕಬಹುದು ಎಂದು  ಟೀಕಿಸಿದ್ದಾರೆ.

ರಂಜಾನ್ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಸಿಎಂ ಇಬ್ರಾಹಿಂ ಮನವಿ ಮಾಡಿದ್ದರು. 

24 ಮತ್ತು 25ರಂದು ರಂಜಾನ್ ಆಚರಣೆ ಇದ್ದು, ಈ ವೇಳೆ ವಿಶೇಷ ಪ್ರಾರ್ಥನೆ ಮಾಡಬೇಕಾಗುತ್ತದೆ, ಹೀಗಾಗಿ ಇಡೀ ಮುಸ್ಲಿಂ ಸಮುದಾಯದ ಪರವಾಗಿ ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ರಂಜಾನ್ ದಿನ ಈದ್ಗಾ ಮೈದಾನದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬೆಳಗ್ಗಿನಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದರು. 

ಮೆಡಿಕಲ್ ತಜ್ಞರ ಜೊತೆ ಸಮಾಲೋಚಿಸಿ ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಎಲ್ಲಾ ಮುಸ್ಲಿಮರು ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. 

SCROLL FOR NEXT