ರಾಜ್ಯ

ಬೆಂಗಳೂರು: ಮೇ 17ಕ್ಕೆ ಗಾಲ್ಫ್ ಕ್ಲಬ್ ಓಪನ್ ಸಾಧ್ಯತೆ

Nagaraja AB

ಬೆಂಗಳೂರು: ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಮೇ 17ಕ್ಕೆ ಗಾಲ್ಫ್ ಕ್ಬಬ್ ತೆರೆಯುವ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಸುಳಿವು ನೀಡಿದ್ದಾರೆ.

ಈ ಸಂಬಂಧ ರಾಜ್ಯ ಗಾಲ್ಫ್ ಅಸೋಸಿಯೇಷನ್ ಮಂಗಳವಾರ ಸಂಜೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದಾಗ್ಯೂ, ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದಿಲ್ಲ.

ಸೂಕ್ತ ನೈರ್ಮಲೀಕರಣ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮಗಳೊಂದಿಗೆ ಗಾಲ್ಫ್ ಕ್ಲಬ್ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶಿಷ್ಟಾಚಾರದಂತೆ ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಸರ್ಕಾರದಿಂದ ಅನುಮತಿ ಬಂದ ಬಳಿಕ ಅದನ್ನು ಅಸೋಸಿಯೇಷನ್ ವೆಬ್ ಸೈಟ್ ನಲ್ಲಿ ಸದಸ್ಯರಿಗಾಗಿ ಅಳವಡಿಸಲಾಗುವುದು ಎಂದು ಕ್ಲಬ್ ಕಾರ್ಯದರ್ಶಿ ಪೃಥ್ವಿ ರಾಜ್ ಅರಸ್ ತಿಳಿಸಿದ್ದಾರೆ. 

ಇದು ಮಹತ್ವದ ಸುದ್ದಿಯಾಗಿದೆ. ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಅಭಿನಂದಿಸುತ್ತೇನೆ. ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ ಗೆ ತರಬೇತಿ ಪಡೆಯಲು ಅವರು ಕಾಲಾವಕಾಶ ನೀಡಿದ್ದಾರೆ. ಸಾಮಾಜಿಕ ಅಂತರ ಮತ್ತಿತರ ನಿಯಮಗಳನ್ನು ಪಾಲಿಸುವ ಮೂಲಕ ಪ್ರಾಕ್ಟೀಸ್ ಮಾಡಲಾಗುವುದು ಎಂದು ಭಾರತದ ಶ್ರೇಷ್ಠ  ಗಾಲ್ಫ್ ಆಟಗಾರ ಚಿಕ್ಕರಂಗಪ್ಪ ತಿಳಿಸಿದ್ದಾರೆ. 

SCROLL FOR NEXT