ಪ್ರತಾಪ್ ಸಿಂಹ 
ರಾಜ್ಯ

73 ಕೋಟಿ ರೂ. ವೆಚ್ಚದಲ್ಲಿ ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆ ಅಭಿವೃದ್ಧಿ: ಪ್ರತಾಪ್ ಸಿಂಹ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಯ 13 ಗ್ರಾಮೀಣ ರಸ್ತೆಗಳನ್ನು ಅಂದಾಜು 73 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವಋತು ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ  ತಿಳಿಸಿದ್ದಾರೆ.

ಮಡಿಕೇರಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೊಡಗು ಜಿಲ್ಲೆಯ 13 ಗ್ರಾಮೀಣ ರಸ್ತೆಗಳನ್ನು ಅಂದಾಜು 73 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವಋತು ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ  ತಿಳಿಸಿದ್ದಾರೆ. 

ಗ್ರಾಮ ಸಡಕ್ ಯೋಜನೆ ಹಂತ 3ರ  ಬ್ಯಾಚ್ 1ರಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 60:40 ಅನುಪಾತದಲ್ಲಿ ಒಟ್ಟು  78.528 ಕೀ.ಮೀ ರಸ್ತೆ ಅಭಿವೃದ್ಧಿ ಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ. 

ಮಡಿಕೇರಿ ತಾಲ್ಲೂಕಿನ  ಬಲಮುರಿಯಿಂದ ಹೊದವಾಡ ಶಾಲೆ ಮಾರ್ಗ ವಾಟೆಕಾಡು, ಹೊದ್ದೂರು 5.59 ಕಿ. ಮೀ  ರಸ್ತೆ,  ಬೆಂಗೂರಿನಿಂದ ಕೋಪಟ್ಟಿ 7.89 ಕಿ.ಮೀ ರಸ್ತೆ, ಬಾವಲಿಯಿಂದ ಎಸ್.ಹೆಚ್ (ನರಿಯಂದಡ) 5.61  ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.  

ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನದಿಂದ ನಾಕೂರು (ಮಾರ್ಗ  ಕಾನ್‍ಬೈಲು, ಬೈಚನಹಳ್ಳಿ,  ನಾಕೂರು, ಶಿರಂಗಾಲ) 6.64 ಕಿ.ಮೀ  ರಸ್ತೆ,  ಅಂದಗೋವೆಯಿಂದ  ಕಂಬಿಬಾಣೆ (ಮಾರ್ಗ ಮೇಟ್ನಹಳ್ಳ ) 6.38 ಕಿ.ಮೀ  ರಸ್ತೆ,  1 ನೇ  ಕೂಡ್ಲುರಿನಿಂದ  ಹಂಡ್ಲಿ 5.90 ಕಿ.ಮೀ ರಸ್ತೆ,  ಸುಂಟಿಯಿಂದ ಗೋಂದಲ್ಲಿ (ಮಾರ್ಗ ಬಸವನಕೊಪ್ಪ, ಶಾಂತವೇರಿ,  ಗೋಂದಳ್ಳಿ) 5.282 ಕಿ.ಮೀ ರಸ್ತೆ, ಕರ್ಕಳ್ಳಿಯಿಂದ ಕುಶಾಲನಗರ ಎಸ್.ಎಚ್. 5.99 ಕಿ.ಮೀ  ರಸ್ತೆ, ವಿರಾಜಪೇಟೆ  ತಾಲ್ಲೂಕಿನ ಹುದಿಕೇರಿಯಿಂದ ಬೆಟ್ಟಚುಕ್ಕಿ (ಮಾರ್ಗ  ಬೆಳ್ಳೂರು)  5.92 ಕಿ. ಮೀ ರಸ್ತೆ,  ಕೆ.ಎಂ.ಕೊಲ್ಲಿಯಿಂದ ಕುಮಟೂರು (ಮಾರ್ಗ ಕೆ.ಬಾಡಗ, ಕಲ್ಲಂಬಲ)  6.73 ಕಿ.ಮೀ  ರಸ್ತೆ,  ಸಿ.ಹೆಚ್. ದೇವಸ್ಥಾನದಿಂದ ಬಲಪನಕೆರೆ (ಮಾರ್ಗ  ಹಲ್ಲಿಗಟ್ಟು,  ಸೀತಾ ಕಾಲೋನಿ, ಚೀನಿವಾಡ,  ಬೇಗೂರು) 7.70 ಕಿ.ಮೀ,  ನಾಂಗಾಲದಿಂದ ಬಿಟ್ಟಂಗಾಲ-ಕೊಂಗಾನ  ರಸ್ತೆ (ವಯಾ  ಕೊತೇರಿ, ಪೆದಕೇರಿ, ವಿ. ಬಾಡಗ,  ಕುಟ್ಟಂದಿ) 8.90 ಕಿ.ಮೀ   ರಸ್ತೆಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸಂಸದರಾದ ಪ್ರತಾಪ್ ಸಿಂಹ ವಿವರಿಸಿದ್ದಾರೆ.  

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ 3 ರ ಬ್ಯಾಚ್-2 ಕಾಮಗಾರಿಯಾದ ಮಡಿಕೇರಿ  ತಾಲ್ಲೂಕಿನ ಬಲಮುರಿಯಿಂದ ಕೊಣಜಗೇರಿ ವಯಾ ನಿಬ್ಬುಗೇರಿ 5.31 ಕಿ.ಮೀ ರಸ್ತೆ ಕಾಮಗಾರಿಗೆ  ಅಂದಾಜು 4.14 ಕೋಟಿಗಳಿಗೆ ಸದ್ಯದಲ್ಲೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!