ರಾಜ್ಯ

ಲಾಕ್ ಡೌನ್ 4.0: ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿರುವ ಕರ್ನಾಟಕ, ನಾಳೆಯಿಂದ ಏನೇನು ಇರಲಿದೆ?

Sumana Upadhyaya

ಬೆಂಗಳೂರು:ಲಾಕ್ ಡೌನ್ 3.0 ನಾಳೆಗೆ ಮುಕ್ತಾಯವಾಗಲಿದ್ದು ಲಾಕ್ ಡೌನ್ 4.0ಗೆ ಸಂಬಂಧಪಟ್ಟಂತೆ ಮಾರ್ಗಸೂಚಿಗೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದತ್ತ ಕುತೂಹಲದಿಂದ ಕಾಯುತ್ತಿದೆ. ಇಂದು ಲಾಕ್ ಡೌನ್ 4.0ಗೆ ಬಗ್ಗೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಡಿಕೆಯಾಗುವ ಸಾಧ್ಯತೆಯಿದೆ.

ಒಂದೆಡೆ ಕೆಂಪು ವಲಯಗಳಲ್ಲಿ ಕೂಡ ಆರ್ಥಿಕ ಚಟುವಟಿಕೆ ಆರಂಭಿಸಲು ಕಾತರವಾಗಿರುವ ರಾಜ್ಯ ಸರ್ಕಾರ ಕೇಂದ್ರ ಅದಕ್ಕೆ ಹಸಿರು ನಿಶಾನೆ ತೋರಿಸುತ್ತದೆಯೇ ಇಲ್ಲವೇ ಎಂಬ ಸಂಶಯದಲ್ಲಿ ಇದೆ. ಸಾರ್ವಜನಿಕ ಸಾರಿಗೆಯನ್ನು ಸಾಮಾಜಿಕ ಅಂತರದ ನಿಯಮಗಳೊಂದಿಗೆ ಆರಂಭಿಸುವ ಇರಾದೆಯಲ್ಲಿ ರಾಜ್ಯ ಸರ್ಕಾರ ಇದೆ.

ಆಪ್ ಆಧಾರಿದ ಕ್ಯಾಬ್ ಗಳು ಕೆಂಪು ವಲಯಗಳಲ್ಲಿ ಓಡಾಡುವ ಸಾಧ್ಯತೆ ತೀರಾ ಕಡಿಮೆ. ಆದರೆ ಇಂದು ಕೇಂದ್ರ ಸರ್ಕಾರ ಹೊರಡಿಸುವ ಮಾರ್ಗಸೂಚಿಯ ಮೇಲೆಯೇ ಎಲ್ಲವೂ ಕೇಂದ್ರೀಕೃತವಾಗಿದೆ. ಮಾಲ್ ಗಳು, ಸಿನೆಮಾ ಹಾಲ್ ಗಳು, ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಆತುರದಲ್ಲಿ ರಾಜ್ಯ ಸರ್ಕಾರ ಇದ್ದಂತಿಲ್ಲ. ಮುಂಗಾರು ಪೂರ್ವ ಸಮಯ ಇದಾಗಿದ್ದು ಈ ಸಮಯದಲ್ಲಿ ಜಾತ್ರೆ, ಗ್ರಾಮಗಳ ಹಬ್ಬಗಳ ಸಮಯ. ಇವುಗಳಿಗೆ ಅವಕಾಶ ಕೊಟ್ಟರೆ ಎಲ್ಲಿ ಜನದಟ್ಟಣೆ ಸೇರಿ ಕೊರೋನಾ ವೈರಸ್ ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಗಾಳಿಗೆ ತೂರಿ ಹೋಗುತ್ತೋ ಎಂಬ ಆತಂಕದಲ್ಲಿ ರಾಜ್ಯ ಸರ್ಕಾರವಿದೆ.

ಮಾಲ್, ಸಿನೆಮಾ ಹಾಲ್ ಗಳು, ಪಾರ್ಕ್ ಗಳು ಮೊದಲಾದವುಗಳನ್ನು ಹೊರತುಪಡಿಸಿ ಬಹುತೇಕ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ಸಡಿಲಿಸಬಹುದು ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

SCROLL FOR NEXT