ರಾಜ್ಯ

ಚಿಕ್ಕಮಗಳೂರಿನಲ್ಲಿ ಐದು ಕೊರೋನಾ ಪ್ರಕರಣ ಪತ್ತೆ; ಹಸಿರು ವಲಯಕ್ಕೆ ಶಾಕ್!

Vishwanath S

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಕೊರೋನಾ ಸೋಂಕು ಕಾಣಿಸಿಕೊಂಡರೂ ಒಂದೇ ಪ್ರಕರಣವಿಲ್ಲದೆ ಹಸಿರು ವಲಯವಾಗಿ ಉಳಿದುಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಹೊಸ ಪ್ರಕರಣಗಳು ವರದಿಯಾಗಿದೆ. 

ಜಿಲ್ಲೆಯ ಕೊಪ್ಪದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮೂವರಿಗೆ ಕೋವಿಡ್-19 ಪತ್ತೆಯಾಗಿದೆ, ಜೊತೆಗೆ, ಇತರ ಭಾಗಗಳಲ್ಲಿದ್ದ ಇಬ್ಬರಿಗೂ ಸೋಂಕು ದೃಢಪಟ್ಟಿದೆ.

ಮುಂಬೈನಿಂದ ಮರಳಿದ್ದ ಎನ್.ಆರ್.ಪುರ ತಾಲ್ಲೂಕಿನ ಕೆರೆಗದ್ದೆಯ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 7 ಮತ್ತು 10 ವರ್ಷದ ಬಾಲಕ, 17 ವರ್ಷದ ಯುವತಿಗೆ ಕೋವಿಡ್ ದೃಢಪಟ್ಟಿದೆ.

ತರೀಕೆರೆಯ 27 ವರ್ಷದ ಗರ್ಭಿಣಿ ಮತ್ತು ಮೂಡಿಗೆರೆಯ 43 ವರ್ಷ ವೈದ್ಯಾಧಿಕಾರಿಗೆ ಸೋಂಕು ದೃಢಪಟ್ಟಿದೆ.

ಸದ್ಯ ರಾಜ್ಯದಲ್ಲಿ ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳು ಮಾತ್ರ ಹಸಿರು ವಲಯಗಳಾಗಿ ಉಳಿದಿವೆ.

SCROLL FOR NEXT