ರಾಜ್ಯ

ಸಮೂಹ ಸಾರಿಗೆ ಸಹವಾಸವೇ ಬೇಡ, ಸಾರ್ವಜನಿಕ ಸಾರಿಗೆ ಬಳಸಲು ಶೇ.36 ರಷ್ಟು ಬೆಂಗಳೂರಿಗರಿಗೆ ನಿರಾಸಕ್ತಿ: ಸಮೀಕ್ಷೆ

Shilpa D

ಬೆಂಗಳೂರು: ಶೇ. 36 ರಷ್ಟು ಪ್ರಮಾಣದ ಬೆಂಗಳೂರು ನಾಗರಿಕರಿಗೆ ಸಾರ್ವಜನಿಕ ಸಾರಿಗೆ ಬಳಸಲು ಇಷ್ಟವಿಲ್ಲ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ನಡೆಸಿದ ಆನ್ ಲೈನ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಜನರಿಗೆ ಪ್ರಯಾಣ ಮಾಡಲು ಸಾರ್ವಜನಿಕ ಸಾರಿಗೆ ಬೇಕೋ ಅಥವಾ ಖಾಸಗಿ ವಾಹನಗಳು ಬೇಕೆ, ಯಾವುದು ನಿಮಗೆ ಅನುಕೂಲ ಎಂಬ ಪ್ರಶ್ನೆಗೆ ನೀಡಿದ ಉತ್ತರದಿಂದ ಅಂಕಿ ಅಂಶ ದೊರೆತಿದೆ.

ಬಸ್‌ಗಳು ರಸ್ತೆಗಿಳಿದರೂ ಅವುಗಳಲ್ಲಿ ಪ್ರಯಾಣಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಒಂದರಿಂದ ಮೂರು ತಿಂಗಳು ಇದೇ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 50ರಷ್ಟು ಜನ ಮುಂದಿನ ಕನಿಷ್ಠ ಮೂರು ತಿಂಗಳು ಬಸ್‌, ನಮ್ಮ ಮೆಟ್ರೋ, ರೈಲು ಸೇರಿದಂತೆ ಸಮೂಹ ಸಾರಿಗೆ ಬಳಸದಿರಲು ನಿರ್ಧರಿಸಿದ್ದಾರೆ.

ಈ ಪೈಕಿ ಶೇ. 36ರಷ್ಟು ಜನ ಸದ್ಯಕ್ಕಂತು ವೈಯಕ್ತಿಕ ಅಥವಾ ಖಾಸಗಿ ವಾಹನದಿಂದ ಸಮೂಹ ಸಾರಿಗೆಗೆ “ಶಿಫ್ಟ್’ ಆಗುವ ಯಾವುದೇ ಚಿಂತನೆ ಇಲ್ಲ ಎಂದು ತಿಳಿಸಿದ್ದು, ಕೆಲಸದ ಉದ್ದೇಶಕ್ಕಾಗಿ ರಸ್ತೆಗಿಳಿಯುವವರಲ್ಲಿ ಶೇ. 50ರಷ್ಟು ಜನ ಕನಿಷ್ಠ ಒಂದು  ತಿಂಗಳು ಸಮೂಹ ಸಾರಿಗೆ ಕಡೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

1,072 ಜನ ಸಮೀಕ್ಷೆಯಲ್ಲಿ ಭಾಗಿ: “ಕೋವಿಡ್‌-19 ಲಾಕ್‌ಡೌನ್‌ ನಂತರ ಸುರಕ್ಷಿತ ಸಮೂಹ ಸಾರಿಗೆ ವ್ಯವಸ್ಥೆಗಳು’ ಶೀರ್ಷಿಕೆ ಅಡಿ ಬಿ.ಪ್ಯಾಕ್‌ ಈಚೆಗೆ ಆನ್‌ಲೈನ್‌ ಸಮೀಕ್ಷೆ ನಡೆಸಿತ್ತು. ಅದರಲ್ಲಿ 1,072 ಜನ ಭಾಗವಹಿಸಿದ್ದರು. ಶೇ. 58ರಷ್ಟು  ಜನ 5 ಕಿ.ಮೀ.ಗೂ ಕಡಿಮೆ ಪ್ರಯಾಣ ಮಾಡಿದರೆ. ಶೇ. 49ರಷ್ಟು ಜನ 5 ಕಿ. ಮೀ.ಗಿಂತ ಹೆಚ್ಚು ಪ್ರಯಾಣಮಾಡುವವರಾಗಿದ್ದಾರೆ.

ಇದರಲ್ಲಿ ಶೇ. 65ರಷ್ಟು ಜನ ಸಾರ್ವಜನಿಕ ಸಾರಿಗೆಯನ್ನು ತಿಂಗಳ ನಂತರ ಅಥವಾ ತಿಂಗಳ ಕೊನೆಯಲ್ಲಿ ಬಳಸಲು ನಿರ್ಧರಿಸಿದ್ದಾರೆ. ಇನ್ನು ಭಾಗವಹಿಸಿದವರಲ್ಲಿ ಶೇ. 41 ಜನ ನಿತ್ಯ ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರಾಗಿದ್ದಾರೆ. ಮೂರು ತಿಂಗಳ ನಂತರ ಸಮೂಹ ಸಾರಿಗೆಗೆ ಮುಖಮಾಡುವವರಲ್ಲಿ ಶೇ. 55 ಜನ 30 ವರ್ಷ ಮೇಲ್ಪಟ್ಟವರಾಗಿದ್ದಾರೆ. 

SCROLL FOR NEXT