ಸಾಂದರ್ಭಿಕ ಚಿತ್ರ 
ರಾಜ್ಯ

ಕೊವಿಡ್-19 ನಿಯಮದಿಂದ ಗಡಿ ದಾಟದೆ ಚೆಕ್​ಪೋಸ್ಟ್​ನಲ್ಲೇ ಮದುವೆಯಾದ ತಮಿಳ್ಗನ್ನಡಿಗರು!

ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್​ಪೋಸ್ಟ್​​ನಲ್ಲಿ ನಡೆದಿದೆ.

ಚಾಮರಾಜನಗರ: ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್​ಪೋಸ್ಟ್​​ನಲ್ಲಿ ನಡೆದಿದೆ.

ಕರ್ನಾಟಕದ ಮತ್ತು ತಮಿಳುನಾಡು ರಾಜ್ಯಗಳ ಜೋಡಿಯೊಂದು ಅಂತರರಾಜ್ಯ ಗಡಿದಾಟದೆ ಪುಣಜನೂರು ಚೆಕ್​ಪೋಸ್ಟ್​​​ನ ಬಾರ್ಡರ್​ನಲ್ಲೇ ಮದುವೆಯಾಗಿದ್ದಾರೆ. ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ತೆರಳಿದ್ದಾರೆ‌.

ಅಂತರ್​ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ರಾಜ್ಯದ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು-ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ, ಪುಣಜನೂರು ಚೆಕ್​ಪೋಸ್ಟ್​​ನ ಗಣೇಶ ಗುಡಿಯಲ್ಲೇ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ಮರಳಿದ್ದಾರೆ‌. ಈ ಮದುವೆಗೆ ಚೆಕ್​ಪೋಸ್ಟ್​​ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾಕ್ಷಿಯಾದರು.

-ಗುಳಿಪುರ ನಂದೀಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ