ರಾಜ್ಯ

ಎಲ್ಲಿ ನೋಡಿದರಲ್ಲಿ ಕಸ, ತ್ಯಾಜ್ಯ: ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರಿಗಿಲ್ಲ ಸ್ಥಾನ!

Sumana Upadhyaya

ಬೆಂಗಳೂರು: ತ್ಯಾಜ್ಯ ನಿರ್ವಹಣೆಯಲ್ಲಿ ಇತ್ತೀಚೆಗೆ ಮೈಸೂರು ನಗರಕ್ಕೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 5 ಸ್ಟಾರ್ ರೇಟಿಂಗ್ ಸಿಕ್ಕಿತ್ತು. ಆ ಪಟ್ಟಿಯಲ್ಲಿ ಬೆಂಗಳೂರಿಗೆ ಯಾವ ಸ್ಟಾರ್ ಸಿಗಲಿಲ್ಲ, ಕನಿಷ್ಠ 4 ಅಥವಾ ಮೂರು ಸ್ಟಾರ್ ರೇಟಿಂಗ್ ಕೂಡ ಸಿಕ್ಕಿರಲಿಲ್ಲ.

ಅದಾಗಿಯೂ ನಗರದಲ್ಲಿ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಮಿತಿ ಸಮಜಾಯಿಷಿ ನೀಡುತ್ತಿದ್ದಾರೆ. ಕೋವಿಡ್-19ನಿಂದಾಗಿ ಬೆಂಗಳೂರು ಸ್ಟಾರ್ ರೇಟಿಂಗ್ ನಲ್ಲಿ ಅವಕಾಶ ಕಳೆದುಕೊಂಡಿದೆ ಎಂಬುದು ಅವರ ಉತ್ತರ.

ಘನತ್ಯಾಜ್ಯ ನಿರ್ವಹಣೆ ದುಂಡು ಮೇಜಿನ ಎಸ್ ಕೆ ರಮಾಕಾಂತ್ ಹೇಳುವುದೇ ಬೇರೆ. ಅಧಿಕಾರಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಇಲ್ಲ, ಸರ್ಕಾರಕ್ಕೂ ನಗರವನ್ನು ಅಭಿವೃದ್ಧಿಪಡಿಸಬೇಕೆಂಬ ಮನಸ್ಸಿಲ್ಲ. ಹಲವು ಯೋಜನೆಗಳನ್ನು ಮಾಡಿದರೂ ಕೂಡ ತಳಮಟ್ಟದಲ್ಲಿ ಕೆಲಸವಾಗುತ್ತಿಲ್ಲ. ತ್ಯಾಜ್ಯ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಮತ್ತು ತ್ಯಾಜ್ಯ ನೀರಿನ ಮೂಲಗಳ ಜೊತೆ ಬೆರೆಯುತ್ತಿದೆ. ವೈದ್ಯಕೀಯ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಇನ್ನೂ ಅಂತಿಮಗೊಂಡಿಲ್ಲ ಎನ್ನುತ್ತಾರೆ.

ಘನತ್ಯಾಜ್ಯ ನಿರ್ವಹಣೆಯ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಡಿ, ಇದು ಸ್ವಚ್ಛ ಭಾರತ ಅಭಿಯಾನ ರೇಟಿಂಗ್ ನ ಮೊದಲ ಭಾಗವಾಗಿದ್ದು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರಿನ ರೇಟಿಂಗ್ ಹೆಚ್ಚಲಿದೆ ಎನ್ನುತ್ತಾರೆ.

ಇಡೀ ರಾಜ್ಯದ ಘನತ್ಯಾಜ್ಯ ನಿರ್ವಹಣೆಯಲ್ಲಿ ಸುಮಾರು ಶೇಕಡಾ 50ರಷ್ಟು ಬೆಂಗಳೂರಿನಲ್ಲಿ ಉತ್ಪತ್ತಿಯಾಗುತ್ತದೆ. ನಗರದಲ್ಲಿ ಉತ್ಪತ್ತಿಯಾಗುವ 5,350 ಟನ್ ತ್ಯಾಜ್ಯಗಳಲ್ಲಿ ಕೇವಲ 3 ಸಾವಿರ ಟನ್ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ಜಸ್ಟೀಸ್ ಸುಭಾಷ್ ಬಿ ಆದಿ ಹೇಳುತ್ತಾರೆ. ಘನತ್ಯಾಜ್ಯ ನಿರ್ವಹಣೆಯ ಅನೇಕ ಸಿಬ್ಬಂದಿ ಕೋವಿಡ್-19 ಕರ್ತವ್ಯದ ಮೇಲೆ ಹೋಗಿರುವುದರಿಂದ ಸದ್ಯ ಈ ಕೆಲಸ ಸ್ಥಗಿತಗೊಂಡಿದೆ ಎನ್ನುತ್ತಾರೆ.

ಆದರೆ ಬಿಬಿಎಂಪಿ ಅಧಿಕಾರಿಗಳು ತಳಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ನಾಗರಿಕರ ಆರೋಪವಾಗಿದೆ.

SCROLL FOR NEXT