ರಾಜ್ಯ

ಸಿಗರೇಟು ಕಂಪೆನಿಗಳಿಂದ ಲಂಚ: ಎಸಿಪಿ ಮತ್ತಿತರ ವಿರುದ್ಧ ತನಿಖೆ ಕೈಗೊಳ್ಳಲು ಸರ್ಕಾರ ಸಮ್ಮತಿ

ಕೋವಿಡ್-19 ರ ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಸಂದರ್ಭದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲಿ ಅಕ್ರಮ ಮಾರಾಟಕ್ಕೆ ಅವಕಾಸ ಕಲ್ಪಿಸಲು ಕೆಲ ತಂಬಾಕು ಮಾರಾಟ ಸಂಸ್ಥೆಗಳಿಂದ ಪೊಲೀಸರು ಲಂಚ ಪಡೆದಿದ್ದ ಪ್ರಕರದ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು: ಕೋವಿಡ್-19 ರ ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಸಂದರ್ಭದಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದ ಸಂದರ್ಭದಲ್ಲಿ ಅಕ್ರಮ ಮಾರಾಟಕ್ಕೆ ಅವಕಾಸ ಕಲ್ಪಿಸಲು ಕೆಲ ತಂಬಾಕು ಮಾರಾಟ ಸಂಸ್ಥೆಗಳಿಂದ ಪೊಲೀಸರು ಲಂಚ ಪಡೆದಿದ್ದ ಪ್ರಕರದ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು ನಗರದ ಸಿಸಿಬಿ ಘಟಕದಲ್ಲಿನ ಕೆಲ ಪೊಲೀಸ್ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಸಹಾಯದಿಂದ ಕೆಲ ಡಿಸ್ಟ್ರಿಬ್ಯೂಟರ್ಸ್ ಗಳೊಂದಿಗೆ ಸಂಪರ್ಕವಿರಿಸಿ ತಮ್ಮ ಅಧಿಕಾರವನ್ನು ದುರುಯೋಗಪಡಿಸಿಕೊಂಡು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿ ಲಂಚದ ಹಣ ಪಡೆದಿರುವುದು ಇಲಾಖಾ ಪೂರ್ವಾಭಾವಿ ವಿಚಾರಣೆಯಿಂದ ತಿಳಿದು ಬಂದಿದೆ.

ಇದೇ ರೀತಿ ಎನ್-95 ನಕಲಿ ಮಾಸ್ಕ್ ಮಾರಾಟ ಜಾಲದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡುವ ನೆಪದಲ್ಲಿಯೂ ಸಹ ಲಂಚದ ಹಣ ಪಡೆದಿರುವುದು ಕಂಡು ಬಂದಿದೆ.

ಈ ಮೇಲ್ಕಂಡ ಪ್ರಕರಣಗಳ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪತ್ರ ಬರೆದು ತಂಬಾಕು ಉತ್ಪನ್ನಗಳ ಡಿಸ್ಟ್ರಿಬ್ಯೂಟರ್ಸ್ ರಿಂದ ಪಡೆದ ಲಂಚ ಮತ್ತು ಎನ್-95 ನಕಲಿ ಮಾಸ್ಕ್ ಮಾರಾಟ ಜಾಲದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ಪೂರ್ವಾನುಮತಿ ನೀಡಿದೆ.

ಸಿಸಿಬಿಯ ಆರ್ಥಿಕ ಅಪರಾಧ ದಳ ಎಸಿಪಿ ಎಂ.ಪ್ರಭುಶಂಕರ್, ಬೆಂಗಳೂರಿನಲ್ಲಿ ಸಿಗರೇಟ್ ಗಳ ಸಗಟು ಪೂರೈಕೆದಾರರೊಬ್ಬರಿಂದ ಮಾಲೀಕರೊಬ್ಬರಿಂದ ಹಾಗೂ ಇತರೆ ಡಿಸ್ಟ್ರಿಬ್ಯೂಟರ್ ಗಳ ಪರವಾಗಿ ಲಾಕ್ ಡೌನ್ ಅವಧಿಯಲ್ಲಿ ನಗರದಾದ್ಯಂತ ಇರುವ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಸಿಗರೇಟ್ ಗಳನ್ನು ವಿತರಿಸಿ ಅಕ್ರಮ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು. 

ಇವರು ಮದ್ಯವರ್ತಿಗಳ ಮುಖೇನ ಲಂಚದ ಹಣ ಸ್ವೀಕರಿಸಿದ್ದು, ಈ ಬಗ್ಗೆ ಅರೋಪಿಗಳಾದ ಎಂ.ಪ್ರಭುಶಂಕರ್, ಇನ್ಸ್ ಪೆಕ್ಟ್ ರಳಗಾದ ಆರ್.ಎಂ.ಅಜಯ್, ನಿರಂಜನ್ ಕುಮಾರ್ ಮತ್ತಿತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಎಂ.ಪ್ರಭುಶಂಕರ್ ಅವರು ಬೆಂಗಳೂರಿನ ಹನುಮಂತನಗರದಲ್ಲಿ ಡಿಸ್ಟ್ರಿಬ್ಯೂಟರ್ ಒಬ್ಬರನ್ನು ಸಿಸಿಬಿ ಕಚೇರಿಗೆ ಕರೆಯಿಸಿಕೊಂಡು ಲಾಕ್ ಡೌನ್ ಅವಧಿಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡುತ್ತಿರುವ ವಿಚಾರದಲ್ಲಿ ಲಂಚದ ಹಣಕ್ಕಾಗಿ ಒತ್ತಾಯಿಸಿ ಮದ್ಯವರ್ತಿಯ ಮುಖೇನ ಲಂಚದ ಹಣ ಸ್ವೀಕರಿಸಿದ್ದು, ಈ ಬಗ್ಗೆ ಅರೋಪಿ ಎಂ.ಪ್ರಭುಶಂಕರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಎನ್-95 ನಕಲಿ ಮಾಸ್ಕ್ ಜಾಲದ ಕುರಿತಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡುವ ನೆಪದಲ್ಲಿ ಲಂಚದ ಹಣ ಸ್ವೀಕರಿಸಿದ್ದಾರೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಇನ್ಸ್ ಪೆಕ್ಟರ್ ಆರ್.ಎಂ.ಅಜಯ್ ಹಾಗು ಇತರರ ವಿರುದ್ದವೂ ಪ್ರಕರಣ ದಾಖಲಾಗಿದೆ. 3 ಪ್ರಕರಣಗಳು ದಾಖಲಾಗಿದ್ದು, ಪ್ರಕರಣದಲ್ಲಿ ಅಧಿಕಾರಿಗಳ ಮತ್ತು ಖಾಸಗಿ ವ್ಯಕ್ತಿಗಳ ಪಾತ್ರದ ಕುರಿತಂತೆ ತನಿಖೆ ಮುಂದುವರೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

ಹೈಕಮಾಂಡ್ ಕರೆದ ತಕ್ಷಣ ದೆಹಲಿಗೆ ಪ್ರಯಾಣ: 2028 ರಲ್ಲೂ ನಮ್ಮದೇ ಸರ್ಕಾರ ಫಿಕ್ಸ್; ಸಿಎಂ ಸಿದ್ದರಾಮಯ್ಯ

ಧಾರವಾಡ ಉಪಚುನಾವಣೆ: ಕುಲಕರ್ಣಿ ಪತ್ನಿಗೆ ಸಿಗುತ್ತಾ ಟಿಕೆಟ್...?

TVK ಶಾಸಕಾಂಗ ಪಕ್ಷದ ನಾಯಕನಾಗಿ ವಿಜಯ್ ಆಯ್ಕೆ; ಮೇ 7ರಂದು ಸಿಎಂ ಆಗಿ ಪ್ರಮಾಣ ವಚನ?

SCROLL FOR NEXT