ರಾಜ್ಯ

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆಗೆ 50 ಲ್ಯಾಬ್ ಗಳು ಸಜ್ಜು

Shilpa D

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಾಗಿ 50 ಪ್ರಯೋಗಾಲಯಗಳಿಗೆ ಎಸಿಎಂಆರ್ ಅನುಮತಿ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ 50 ಲ್ಯಾಬ್ ಗಳಿದ್ದು, ಅದರಲ್ಲಿ 29 ಸರ್ಕಾರಿ ಮತ್ತು 21 ಖಾಸಗಿ ಪ್ರಯೋಗಾಲಯಗಳಿವೆ. ಕೆಲವು ಲ್ಯಾಬ್ ಗಳಲ್ಲಿ  ಆರ್ ಟಿ -ಪಿಸಿಆರ್ ವಿಧಾನ ಬಳಸಲಾಗುತ್ತಿದೆ.

ಮಣಿಪಾಲ್ ಆಸ್ಪತ್ರೆ-ಬೆಂಗಳೂರು, ಸೇಂಟ್ ಜಾನ್ ಮತ್ತು ಹಾಸ್ಮಾಟ್-  ಬೆಂಗಳೂರು, ಜೆಜೆಎಂ ಆಸ್ಪತ್ರೆ-ದಾವಣಗೆರೆ, ಫಾದರ್ ಮ್ಯಾಕ್ಸ್ ಮುಲ್ಲರ್ ಮೆಡಿಕಲ್ ಕಾಲೇಜು-ಮಂಗಳೂರು, ಕಸ್ತೂರ್ ಬಾ ಮೆಡಿಕಲ್ ಕಾಲೇಜು-ಮಣಿಪಾಲ್, ಕ್ಸಿಟೋನ್ ಡಯಾಗ್ನೋಸ್ಟಿಕ್ -ಬೆಂಗಳೂರು,ಎಸ್ ಎಸ್ ಐಎಂಎಸ್ಆರ್ ಸಿ- ದಾವಣಗೆರೆಯಲ್ಲಿ ಹೊಸ ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ.

SCROLL FOR NEXT