ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕ್ವಾರಂಟೈನ್ ತಪ್ಪಿಸಿಕೊಳ್ಳಬೇಕೆ? ಹೊಸ ದಂಧೆಯ ಬಲೆಗೆ ಬಿದ್ದು ಮೋಸ ಹೋಗಬೇಡಿ!

ಇತ್ತೀಚೆಗೆ ದಂಪತಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದರು. ಗಾಂಧಿ ನಗರದ ಹೊಟೇಲ್ ವೊಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ದಂಪತಿ ಬಳಿ ಬಂದ ವ್ಯಕ್ತಿ ತಾನು ವೈದ್ಯ ಎಂದು ಹೇಳಿಕೊಂಡು, ಮೆಡಿಕಲ್ ಟೆಸ್ಟ್ ನಿಂದ ಬಚಾವು ಮಾಡುತ್ತೇನೆ 25 ಸಾವಿರ ರು. ಕೊಡಿ ಎಂದು ಹೇಳಿದ್ದಾನೆ.

ಬೆಂಗಳೂರು: ಇತ್ತೀಚೆಗೆ ದಂಪತಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದರು. ಗಾಂಧಿ ನಗರದ ಹೊಟೇಲ್ ವೊಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ದಂಪತಿ ಬಳಿ ಬಂದ ವ್ಯಕ್ತಿ ತಾನು ವೈದ್ಯ ಎಂದು ಹೇಳಿಕೊಂಡು, ಮೆಡಿಕಲ್ ಟೆಸ್ಟ್ ನಿಂದ ಬಚಾವು ಮಾಡುತ್ತೇನೆ 25 ಸಾವಿರ ರು. ಕೊಡಿ ಎಂದು ಹೇಳಿದ್ದಾನೆ.

ಇದನ್ನು ಕೇಳಿದ ದಂಪತಿ ಹೊಟೇಲ್ ಸಿಬ್ಬಂದಿ ಮೂಲಕ ಬಿಬಿಎಂಪಿಗೆ  ವಿಷಯ ತಿಳಿಸಿದ್ದಾರೆ, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ನಂದಾ ಅವರು ದಾಖಲಿಸಿದ ದೂರಿನ ಮೇರೆಗೆ ಗಾಂಧಿನಗರ ಪೊಲೀಸರು, 56 ವರ್ಷದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಬ್ಯಾಟರಾಯನಪುರ ನಿವಾಸಿ ಕೃಷ್ಣೇಗೌಡ ಹೊಟೆಲ್ ಗೆ ಬಂದು ತಾನು ವೈದ್ಯನೆಂದು ಹೇಳಿಕೊಂಡಿದ್ದಾನೆ. ಹೊಟೇಲ್ ಬಾಡಿಗೆ 27 ಸಾವಿರ ರು ನೀಡಬೇಕಿಲ್ಲ, ಅದರ ಬದಲು 25 ಸಾವಿರ ರು ನೀಡಿದರೇ ಸಾಕು ಎಂದು ಹೇಳಿ ಹೋಗಿದ್ದಾನೆ. 

ದಂಪತಿ ಹೊಟೆಲ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸಿಬ್ಬಂದಿ ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೆ ಆ ವೇಳೆಗೆ ಕೃಷ್ಣೆಗೌಡ ಪರಾರಿಯಾಗಿದ್ದ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ  ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT