ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮಹಾರಾಷ್ಟ್ರ ನಂಜಿಗೆ ಕರ್ನಾಟಕ ತತ್ತರ: ಇಂದು 97 ಪ್ರಕರಣ ಪತ್ತೆ, 2000 ದಾಟಿದ ಸೋಂಕಿತರ ಸಂಖ್ಯೆ!

ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು ಇಂದು 97 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.

ಸಂಗ್ರಹ ಚಿತ್ರ
Vishwanath S
Updated On : 24 May 2020, 2:29 pm

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು ಇಂದು 97 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ. 

ಮಹಾರಾಷ್ಟ್ರ ನಂಜಿಗೆ ಕರ್ನಾಟಕ ತತ್ತರಿಸಿದ್ದು 97 ಪ್ರಕರಣಗಳ ಪೈಕಿ 74 ಪ್ರಕರಣಗಳಿಗೆ ಮುಂಬೈ ನಂಟಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಒಂದೇ ಒಂದು ಕೇಸ್ ಪತ್ತೆಯಾಗದಿರುವುದು ಸ್ವಲ್ಪ ನೆಮ್ಮದಿ ತಂದಿದೆ. 

ಚಿಕ್ಕಬಳ್ಳಾಪುರ 26, ಉಡುಪಿ 18, ಹಾಸನ 14, ಮಂಡ್ಯ 15,  ಕಲಬುರಗಿ 6, ದಾವಣಗೆರೆ 4, ಯಾದಗಿರಿ 5, ತುಮಕೂರು 2, ಉತ್ತರ ಕನ್ನಡ 2, ವಿಜಯಪುರ, ದಕ್ಷಿಣ ಕನ್ನಡ, ಕೊಡಗಿನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. 

Advertisement

Advertisement

ರಾಜ್ಯದಲ್ಲಿ ಒಟ್ಟಾರೆ 2056 ಪ್ರಕರಣ ಪೈಕಿ 635 ಮಂದಿ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 1,378 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟಾರೆ 42 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement