ರಾಜ್ಯ

ತುಮಕೂರಿನಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ; 60 ವರ್ಷದ ಮಹಿಳೆ ಸಾವು

Raghavendra Adiga

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ.

ನೆಲಮಂಗಲ ತಾಲ್ಲೂಕಿನ ವೀರಸಾಗರದ 60 ವರ್ಷದ ಮಹಿಳೆ ನಿಗದಿತ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇವರು ಮೇ 19ರಂದು ಶ್ವಾಸಕೋಶದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲು ದ್ರವ ಮತ್ತು ಕಫದ ಮಾದರಿಯನ್ನು ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿತ್

ಕೊರೋನಾ ದೃಢಪಟ್ಟ ಎರಡೇ ದಿನದಲ್ಲಿ ಮಹಿಳೆ ಸಾವಿಗೀಡಾಗಿದ್ದು ಮಹಿಳೆ ಕಳೆದ ಎರಡು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು, ಆಕೆಯ ಶ್ವಾಸಕೋಶ ಸಹ ಸಂಪೂರ್ಣ ಹದಗೆಟ್ಟಿತ್ತು ಎಂದು ತುಮಕೂರು ಡಿಎಚ್ ಓ ಡಾ. ನಾಗೇಂದ್ರಪ್ಪ  ಹೇಳಿದ್ದಾರೆ.

ತುಮಕೂರಿನಲ್ಲಿ ಇದಾಗಲೇ ಸಿರಾ ಹಾಗೂ ತುಮಕೂರು ತಾಲೂಕಿನ ಇಬ್ಬರು‌ ವೃದ್ಧರು ಕೊರೋನಾದಿಂದ ಸಾವನ್ನಪ್ಪಿದ್ದು ಇದು ಜಿಲ್ಲೆಯಲ್ಲಿ ನಡೆದ ಮೂರನೇ ಸಾವಿನ ಪ್ರಕರಣವಾಗಿದೆ. 

SCROLL FOR NEXT