ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ: ಅಮೆರಿಕಾದ ಡ್ಯೂಕ್ ವಿಶ್ವವಿದ್ಯಾಲಯದಿಂದ ಕರ್ನಾಟಕದಲ್ಲಿ ರಾಂಡಮ್ ಟೆಸ್ಟ್

ಉತ್ತರ ಕೆರೊಲಿನಾ ಮೂಲದ ಡ್ಯೂಕ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವು ರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್‌ಟಿ-ಪಿಸಿಆರ್ ಕಿಟ್‌ಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೋವಿಡ್ ರಾಂಡಮ್ ಪರೀಕ್ಷೆಯನ್ನು ನಡೆಸಲು ಅನುಮೋದನೆ ಪಡೆದಿದೆ.

ಬೆಂಗಳೂರು: ಉತ್ತರ ಕೆರೊಲಿನಾ ಮೂಲದ ಡ್ಯೂಕ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾವು ರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರ್‌ಟಿ-ಪಿಸಿಆರ್ ಕಿಟ್‌ಗಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೋವಿಡ್ ರಾಂಡಮ್ ಪರೀಕ್ಷೆಯನ್ನು ನಡೆಸಲು ಅನುಮೋದನೆ ಪಡೆದಿದೆ. ಇದನ್ನು ಡ್ಯೂಕ್ ವಿಶ್ವವಿದ್ಯಾಲಯದ ಸ್ಯಾನ್ಫೋರ್ಡ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಎಕನಾಮಿಕ್ಸ್ ಮತ್ತು ಗ್ಲೋಬಲ್ ಹೆಲ್ತ್‌ನ ಸಹಾಯಕ ಪ್ರಾಧ್ಯಾಪಕಮನೋಜ್ ಮೊಹ್ನಾನ್ ಅವರು ಎರಡು ಭಾರತೀಯ ಸಂಸ್ಥೆಗಳ ಸಹಕಾರದೊಡನೆ ನಡೆಸಲಿದ್ದಾರೆ.

ಆರೋಗ್ಯ ಆಯುಕ್ತ ಪಂಕಜ್ ಪಾಂಡೆ ಅವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವೈದ್ ಅಖ್ತರ್ ಬರೆದ ಪತ್ರದಲ್ಲಿ "ಮೊಹ್ನಾನ್ ಅವರು ಕ್ಷಿಪ್ರ ದತ್ತಾಂಶ ಸಂಗ್ರಹಕ್ಕಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಬಳಸಿಕೊಂಡು ರಾಂಡಮ್ ಕೋವಿಡ್ ಪರೀಕ್ಷೆಯನ್ನು ನಡೆಸಲು ಅನುಮತಿ ಕೋರಿದರು, ಇದು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಪ್ರದೇಶಗಳಲ್ಲಿ ಸಂಭಾವ್ಯ ಪ್ರಸರಣ ಮತ್ತು ಕರ್ನಾಟಕ ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಅಂದಾಜು ಮಾಡಲು ಅನುವು ಮಾಡಿಕೊಡುತ್ತದೆ, ಸೆಂಟರ್ ಫಾರ್ ಮಾನಿಟರಿ ಇಂಡಿಯನ್ ಎಕಾನಮಿ (ಸಿಎಮ್ಐಇ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಬಲದೊಂದಿಗೆ ಇದು ನೆರವೇರಲಿದೆ" ಎಂದು ವಿವರಿಸಲಾಗಿದೆ.

"ರಾಜ್ಯ ಕಣ್ಗಾವಲು ಘಟಕ, ಐಡಿಎಸ್ಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮೇಲ್ವಿಚಾರಣೆಗೆ ಒಳಪಟ್ಟು ಕರ್ನಾಟಕದಲ್ಲಿ ರ್ಯಾಂಡಮ್ ಕೊರೋನಾ ಪರೀಕ್ಷೆ ನಡೆಸಲು ಸ್ಯಾನ್ಫೋರ್ಡ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ, ಡ್ಯೂಕ್ ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಲಾಗುತ್ತಿದೆ ಪರೀಕ್ಷೆಯ ಸಮಯದಲ್ಲಿ ಐಸಿಎಂಆರ್ ಕಿಟ್‌ಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸುವ ಷರತ್ತಿಗೆ ಒಳಪಟ್ಟು ಇದು ನಡೆಯಲಿದೆ" ಐಡಿಎಫ್‌ಸಿ ಪ್ರತಿಷ್ಠಾನದ ಸಹಾಯದಿಂದ ಈ ಪರೀಕ್ಷೆಗಳು ನಡೆಯುತ್ತದೆ.

"ಐಡಿಎಫ್‌ಸಿ ಪ್ರತಿಷ್ಠಾನದ ಮೂಲಕ ಪ್ರಾಯೋಗಿಕ ಯೋಜನೆ ಜಾರಿಯಾಗುತ್ತಿದ್ದು ಇದಕ್ಕಾಗಿ ಐಡಿಎಫ್‌ಸಿ ಬ್ಯಾಂಕಿನಿಂದ ಧನಸಹಾಯವನ್ನು ಪಡೆಯಲಾಗುತ್ತದೆ. ಕರ್ನಾಟಕದಾದ್ಯಂತ ಸುಮಾರು 2000 ಮಾದರಿಗಳ ರಾಂಡಮ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ. ಇದು ಪ್ರಸ್ತಾವನೆಯ ಹಂತದಲ್ಲಿದೆ" ಎಂದು ಪಂಕಜ್ ಕುಮಾರ್ ಪಾಂಡೆ ಹೇಳಿದರು.

ರಾಜ್ಯದಲ್ಲಿ ಇಲ್ಲಿಯವರೆಗೆ ಪಾದರಾಯನಪುರ ಹಾಗೂ ಹೊಂಗಸಂದ್ರಗಳಲ್ಲಿ ರಾಂಡಮ್ ಪರೀಕ್ಷೆ ನಡೆಯುತ್ತಿದೆ. "ಬೆಂಗಳೂರಿನಲ್ಲಿಪಾದರಾಯನಪುರ ಕಂಟೈನ್ಮೆಂಟ್ ವಲಯದಲ್ಲಿ  200 ಕ್ಕೂ ಹೆಚ್ಚು ರಾಂಡಮ್ ಪರೀಕ್ಷೆಗಳನ್ನು ನಡೆಸಲಾಗಿದೆ. ಹಸಿರು ಜಿಲ್ಲೆಗಳಲ್ಲಿ, ಇನ್ಫ್ಲು  Influenza Like Illness ಗಾಗಿ ರ್ಯಾಂಡಮ್ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿದಿನ ಸುಮಾರು 500 ಐಎಲ್ಐ ಮಾದರಿಗಳನ್ನು ಪಡೆಯಲಾಗುತ್ತಿದ್ದು ಆರ್ಟಿ-ಪಿಸಿಆರ್ ವಿಧಾನದ ಮೂಲಕ ಪರೀಕ್ಷಿಸಲಾಗುತ್ತಿದೆ "ಐಸಿಎಂಆರ್ ಅನುಮೋದಿತ ಕ್ಷಿಪ್ರ ಪ್ರತಿಕಾಯ, ಆರ್ಟಿ-ಪಿಸಿಆರ್ ಮತ್ತು ಎಲಿಸಾ ಪರೀಕ್ಷೆಗಳನ್ನು ಬಳಸಿಕೊಂಡು ರಾಂಡಮ್ ಪರೀಕ್ಷೆ ಮಾಡಲು ಕೋಲಾರ ಜಿಲ್ಲೆಯಲ್ಲಿ ಟಾಟಾ ಸಮೂಹದ ಸಹಾಯದಿಂದ ಪೈಲಟ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ" ಎಂದು ಪಾಂಡೆ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

'ಕುವೆಂಪು ನಾಡಕವಿಯಲ್ಲ, ರಾಷ್ಟ್ರಕವಿ': ಬಿ.ವೈ. ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

SCROLL FOR NEXT