ಮಹಾರಾಷ್ಟ್ರದಲ್ಲಿ ಮಿಡತೆ ಹಾವಳಿ: ಕರ್ನಾಟಕದಲ್ಲಿ ಕಟ್ಟೆಚ್ಚರ! 
ರಾಜ್ಯ

ಮಹಾರಾಷ್ಟ್ರದಲ್ಲಿ ಮಿಡತೆ ಹಾವಳಿ: ಕರ್ನಾಟಕದಲ್ಲಿ ಕಟ್ಟೆಚ್ಚರ! 

ಕೊರೋನಾ ನಿಭಾಯಿಸುವ ಒತ್ತಡ ಸಾಲದೆಂಬಂತೆ ಸರ್ಕಾರ, ಜನತೆಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. 

ವಿಜಯಪುರ: ಕೊರೋನಾ ನಿಭಾಯಿಸುವ ಒತ್ತಡ ಸಾಲದೆಂಬಂತೆ ಸರ್ಕಾರ, ಜನತೆಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. 

ಒಂದೆಡೆ ಕೊರೋನಾ ಕಾಟವಾದರೆ, ಮತ್ತೊಂದೆಡೆ ಉತ್ತರ ಭಾರತದ 5 ರಾಜ್ಯಗಳಲ್ಲಿ ಈಗಾಗಲೇ ತಲೆನೋವಾಗಿ ಪರಿಣಮಿಸಿರುವ ಮಿಡತೆಗಳ ಹಾವಳಿ ಮಹಾರಾಷ್ಟ್ರದ ಮೂಲಕ ರಾಜ್ಯಕ್ಕೂ ಕಾಡುವ ಆತಂಕ ಉಂಟಾಗಿದೆ. 

ಉತ್ತರ ಭಾರತದಲ್ಲಿ ಬೆಳೆಗಳನ್ನು ನಾಶ ಮಾಡಿ ಮಹಾರಾಷ್ಟ್ರದೆಡೆಗೆ ಧಾವಿಸಿರುವ ಮಿಡತೆಗಳು ಕರ್ನಾಟಕಕ್ಕೂ ಆಗಮಿಸುವ ಸಾಧ್ಯತೆಗಳಿವೆ. ಈಗಾಗಲೇ ಈಶಾನ್ಯ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿದ್ದು, ಕರ್ನಾಟಕದ ಗಡಿ ಜಿಲ್ಲೆಗಳ ರೈತರಿಗೆ ಈ ಕುರಿತು ಆತಂಕ ಉಂಟಾಗಿದೆ. ಈ ಬೆನ್ನಲ್ಲೇ ಕೃಷಿ ಹಾಗೂ ರೈತ ಸಚಿವಾಲಯ ಮಿಡತೆ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. 

ಈ ಮಿಡತೆಗಳು ಬೆಳೆದು ನಿಂತಿರುವ ಪೈರುಗಳನ್ನು ಎಲ್ಲಾ ರೀತಿಯ ಸಸ್ಯಗಳನ್ನು ತಿನ್ನುತ್ತವೆ. ಗಾಳಿ ಯಾವ ಕಡೆ ಬೀಸುತ್ತದೆಯೋ ಆ ಭಾಗಕ್ಕೆ ಹಾರುವ ಇವುಗಳು ದಿನವೊಂದಕ್ಕೆ 200 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿವೆ. ಎಲ್ಲಾ ರೀತಿಯ ಸಸ್ಯಗಳಿಗೂ ಹಾನಿಕಾರಕವಾಗಿವೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಈ ಮಿಡತೆಗಳು ಗಾಳಿ ಬೀಸುವ ದಿಕ್ಕಿನಲ್ಲಿ ಹಾರಲಿವೆ. ಈಗ ಗಾಳು ಉತ್ತರಕ್ಕೆ ಬೀಸುತ್ತಿದೆ ಹಾಗಾಗಿ ರಾಜ್ಯಕ್ಕೆ ಇವುಗಳು ಆಗಮಿಸುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ಗಾಳಿ ದಕ್ಷಿಣ ಭಾಗಕ್ಕೆ ಬೀಸಿದರೆ, ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. 

ಈಗ ಬೆಳಗೆಳಾವು ಇಲ್ಲದಿದ್ದರೂ ಸಸ್ಯ ಸಂಕುಲಕ್ಕೆ ಇವುಗಳಿಂದ ಅಪಾಯವಿದೆ ಎನ್ನುತ್ತಾರೆ ಬ್ರಿಜೇಶ್ ಕುಮಾರ್. ಇನ್ನು ವಿಪಕ್ಷ ಕಾಂಗ್ರೆಸ್ ನ ನಾಯಕ, ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಮಾತನಾಡಿ, ಈ ಮಿಡತೆ ಹಾವಳಿಯ ಬಗ್ಗೆ ಒಂದು ತಿಂಗಳ ಮುಂಚೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಚ್ಚರಿಸಲಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಯತ್ನಿಸಬೇಕೆಂದು ಮುಖ್ಯಮಂತ್ರಿಗಳು, ಕೃಷಿ ಸಚಿವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋವಿಡ್ ವೇಳೆ ಆಕ್ಸಿಜನ್ ಇಲ್ಲದೆ ಜನ ಪ್ರಾಣ ಬಿಟ್ಟಾಗ ಸಂವೇದನೆಯನ್ನೂ ICU ನಲ್ಲಿಟ್ಟಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ತರಾಟೆ!

ಸದನದಲ್ಲಿ 'CM ಕುರ್ಚಿ ಕಿತ್ತಾಟ' ಪ್ರತಿಧ್ವನಿ: ಸಿದ್ದರಾಮಯ್ಯ ಸೇರಿ 139 ಶಾಸಕರೂ ನನ್ನ ಬಲ ಎಂದ DCM ಡಿ.ಕೆ.ಶಿವಕುಮಾರ್!

ಲಡಾಖ್ ಗಡಿ ಸಂಘರ್ಷ: ಮಾಜಿ ಸೇನಾಧಿಕಾರಿ ನರವಾಣೆ ಪುಸ್ತಕ ಪ್ರಸ್ತಾಪಿಸಿದ ರಾಹುಲ್ ಗಾಂಧಿ; ಸಂಸತ್ ನಲ್ಲಿ ಕೋಲಾಹಲ; Video

ಸೋನಮ್ ವಾಂಗ್ಚುಕ್ ಲಡಾಖ್ ನ್ನು ನೇಪಾಳವನ್ನಾಗಿಸಲು ಬಯಸುತ್ತಿದ್ದಾರೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ

ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ನಿರ್ಮಾಪಕ ಸಂಘದಿಂದ ದೂರು

SCROLL FOR NEXT