ಬಿ ಎಸ್ ಯಡಿಯೂರಪ್ಪ 
ರಾಜ್ಯ

ಧಾರ್ಮಿಕ ಕೇಂದ್ರಗಳ ಮರು ಆರಂಭ: ಕೇಂದ್ರದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ

ಕೊರೋನಾ ವೈರಸ್ ಲಾಕ್ ಡೌನ್ ನಿಂದ ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ದು ಅದನ್ನು ತೆರೆಯುವುದು ಮತ್ತು ಹಿಂದಿನ ಸ್ಥಿತಿಗೆ ತರುವುದು ಸವಾಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರು ಸೇರಿ ಸಾಮಾಜಿಕ ಅಂತರ ಪರಿಕಲ್ಪನೆಗೆ ತೊಂದರೆಯಾಗುವುದನ್ನು ತಪ್ಪಿಸುವುದು ಧಾರ್ಮಿಕ ಕೇಂದ್ರವನ್ನು ಮುಚ್ಚಿದ್ದರ ಮುಖ್ಯ ಉದ್ದೇಶವಾಗಿತ್ತು.

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದ ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ದು ಅದನ್ನು ತೆರೆಯುವುದು ಮತ್ತು ಹಿಂದಿನ ಸ್ಥಿತಿಗೆ ತರುವುದು ಸವಾಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರು ಸೇರಿ ಸಾಮಾಜಿಕ ಅಂತರ ಪರಿಕಲ್ಪನೆಗೆ ತೊಂದರೆಯಾಗುವುದನ್ನು ತಪ್ಪಿಸುವುದು ಧಾರ್ಮಿಕ ಕೇಂದ್ರವನ್ನು ಮುಚ್ಚಿದ್ದರ ಮುಖ್ಯ ಉದ್ದೇಶವಾಗಿತ್ತು.

ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಪಂಡಿತ್ ಜವಹರಲಾಲ್ ನೆಹರೂರವರ 56 ನೇ ಪುಣ್ಯತಿಥಿಯ ಸಂಬಂಧ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇ 31ರ ನಂತರ ರಾಜ್ಯದಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರದ ಅನುಮತಿಗೆ ರಾಜ್ಯ ಕಾಯುತ್ತಿದ್ದು ಜೂನ್ 1ರ ನಂತರ ಅನುಮತಿ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಅನುಮತಿ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಹೊಟೇಲ್, ರೆಸ್ಟೋರೆಂಟ್ ಗಳ ತೆರೆಯುವಿಕೆಗೆ ಸಹ ಕೇಂದ್ರ ಸರ್ಕಾರದ ಅನುಮತಿಗೆ ರಾಜ್ಯ ಸರ್ಕಾರ ಕಾಯುತ್ತಿದೆ.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ತೆರೆಯುವ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಲಾಕ್ ಡೌನ್ ನಿಯಮದಲ್ಲಿ ಬದಲಾವಣೆ ಮಾಡಲು ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿವೆ.

ಈ ಸಂಬಂಧ ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು ಅಲ್ಲಿ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೇರಳ- ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್ ವಿರೋಧ!

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಪಲಾಯನವಾದಿಯಲ್ಲ, ನಾನು ರಾಮನಗರಕ್ಕೆ ಫಿಕ್ಸ್: ಎಲ್ಲಾ ಕಡೆಯಿಂದಲೂ ವಿರೋಧಿಗಳು ನನ್ನ ರೌಂಡಪ್ ಮಾಡ್ತಾರೆ; ನಿಖಿಲ್

SCROLL FOR NEXT