ರಾಜ್ಯ

ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ ಲಂಚಕ್ಕೆ ಬೇಡಿಕೆ: ಅಧಿಕಾರಿಯಿಂದ ದೂರು ದಾಖಲು

Shilpa D

ಕಲಬುರಗಿ: ಕಲಬುರಗಿ ದಕ್ಷಿಣ ‌ಕ್ಷೇತ್ರದ ಶಾಸಕ ದತ್ತಾತ್ರೇಯ ‌ಪಾಟೀಲ ರೇವೂರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರಿಗೆ ‌ಶಾಸಕರ ಬೆಂಬಲಿಗರಾದ ಪಾಲಿಕೆ ಸದಸ್ಯ ಪ್ರಭು ಹಾದಿಮನಿ ಹಾಗೂ ಚಂದ್ರಕಾಂತ ‌ಎಂಬುವವರು ಜೀವ ಬೆದರಿಕೆ ‌ಹಾಕಿದ್ದಾರೆ ಎಂದು ದೂರಿದ್ದಾರೆ.

ರಾತ್ರಿ ಹಲವು ಬಾರಿ ತಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ರಾತ್ರಿ 3 ಗಂಟೆಗೆ ದೂರು   ನೀಡಿದ್ದಾರೆ. ಶಾಸಕ ಪಾಟೀಲ ಬಡವರಿಗಾಗಿ ದಿನಸಿ ಕಿಟ್ ನೀಡುತ್ತಿದ್ದು, ಅದಕ್ಕಾಗಿ ನೆರವು ನೀಡುವಂತೆ ತಮ್ಮ ಆಪ್ತಸಹಾಯಕ ಪ್ರವೀಣ ಮೂಲಕ ಸಂಗಾ ಅವರಿಗೆ ಕರೆ ಮಾಡಿಸಿದ್ದರು. ಆದರೆ ಸಂಗಾ ಹಣ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕರು ಹಲವು ಬಾರಿ ತಮಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಸಂಗಾ ದೂರು
ದಾಖಲಿಸಿದ್ದಾರೆ.

ಆದರೆ ಅಧಿಕಾರಿಯ ಆರೋಪವನ್ನು ಶಾಸಕ ದತ್ತಾತ್ರೇಯ ಪಾಟೀಲ ಅಲ್ಲಗಳೆದಿದ್ದಾರೆ. ಸೋಂಕಿತರನ್ನು ತನ್ನ ಕ್ಷೇತ್ರದಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ಜನ ವಿರೋಧಿಸಿದ್ದರಿಂದ ಬೇಡವೆಂದು ಹೇಳಿರೋದಾಗಿ ಒಪ್ಪಿಕೊಂಡಿದ್ದಾರೆ.

SCROLL FOR NEXT