ರಾಜ್ಯ

ಶಾಲೆ ನಡೆಸಲು ಅವಕಾಶ ಕೋರಿ ಪ್ರಿ ಸ್ಕೂಲ್ ಮುಖ್ಯಸ್ಥರ ನಿಯೋಗ ಶಿಕ್ಷಣ ಸಚಿವರಿಗೆ ಮನವಿ

Raghavendra Adiga

ಬೆಂಗಳೂರು: ಬೆಂಗಳೂರಿನ ಪೂರ್ವ ಪ್ರಾಥಮಿಕ ಶಾಲೆ(ಪ್ರಿ ಸ್ಕೂಲ್)ಪ್ರತಿನಿಧಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಗುರುವಾರ ಭೇಟಿಯಾಗಿದ್ದು ಶೀಘ್ರದಲ್ಲೇ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಡ್ದಾಯ ಮಾರ್ಗಸೂಚಿಗಳ ಜತೆಗೆ ತಾವು ತರಗತಿ ಪುನಾರಂಬ ಮಾಡುವುದಾಗಿ ಅವರು ಇದೇ ವೇಳೆ ಸಚಿವರಿಗೆ ಮನವರಿಕೆ ಮಾಡಿದ್ದಾರೆ.

ಇತ್ತೀಚೆಗೆ, ಕೆಲವು ಶಾಲೆಗಳು ಆನ್‌ಲೈನ್ ತರಗತಿ ಪ್ರಾರಂಭಿಸಿದ್ದ ಕಾರಣ ಪೋಷಕರು ಹಾಗೂ ಶಿಕ್ಷಣ ಸಚಿವರಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಆದಾಗ್ಯೂ, ಅಂತಹ ಒಂದು ಶಾಲೆಯ ಆಡಳಿತಾಧಿಕಾರಿ ಆಕಾಶ್ ಪತ್ರಿಕೆಯೊಂದಿಗೆ ಮಾತನಾಡಿ ನಿಮ್‌ಹ್ಯಾನ್ಸ್‌ನ ನಿರ್ದೇಶಕರು ಸ್ವತಃ ಸಚಿವರಿಗೆ ಚಿಕ್ಕ ಮಕ್ಕಳಿಗೆ ಆನ್‌ಲೈನ್ ಕಲಿಕೆಯ ವಿಧಾನಗಳನ್ನು ಬಳಸುವುದರ ವಿರುದ್ಧ ಸಲಹೆ ನೀಡಿದ್ದಾರೆ ಎಂದರು.

ಆನ್‌ಲೈನ್ ತರಗತಿಗಳು ಪ್ರಾರಂಬವಾಗುವ ಹಾಗೂ ಶಾಲೆಗಳು ತೆರೆಯುವ ಬಗ್ಗೆ ಇರುವ ಅನಿಶ್ಚಿತತೆಯ ನಡುವೆ ಅವುಗಳ ಸುಸ್ಥಿರತೆ ಮತ್ತು ಅಸ್ತಿತ್ವ ಪಆಯದಲ್ಲಿದೆ ಎಂದು ಆಕಾಶ್ ಹೇಳಿದ್ದಾರೆ., ಈಗ ಸರಾಸರಿ 20-30 ಶೇಕಡಾ ಸಾಮರ್ಥ್ಯದೊಡನೆ ಶಾಲೆಗಳು ನಡೆಯುತ್ತಿದೆ.  ಉದಾಹರಣೆಗೆ, ಒಂದು ಶಾಲೆಯು ಈಗ 80ಪ್ರವೇಶಾತಿಯನ್ನು ಹೊಂದಿದ್ದರೆ ಈ ಶೈಕ್ಷಣಿಕ ವರ್ಷದಲ್ಲಿ ಅವರು ಕೇವಲ 20-25 ಪ್ರವೇಶಾತಿಯನ್ನಷ್ಟೇ ಸ್ವೀಕರಿಸುತ್ತಾರೆ. 

ಏತನ್ಮಧ್ಯೆ, ಶಾಲೆಗಳು ಲಾಕ್‌ಡೌನ್‌ ನಿಂದ ಹೊರಬರಲು ಹಾಗೂ ಪುನಾರಂಬಗೊಳ್ಲಲು ಮಾರ್ಗಸೂಚಿಗಳನ್ನು ರೂಪಿಸಿವೆ. ವಿದ್ಯಾರ್ಥಿಗಳಿಗೆ ಮೂಲಭೂತ ನೈರ್ಮಲ್ಯ ಅಭ್ಯಾಸಗಳನ್ನು ಕಲಿಸುವುದು ಇದರಲ್ಲಿ ಸೇರಿದೆ.

SCROLL FOR NEXT