ರಾಜ್ಯ

ಅರಮನೆ ಮೈದಾನದಲ್ಲಿ ಕುಸಿದ ವಲಸಿಗರ ಶೆಡ್: ಪೊಲೀಸರಿಂದ ಇಬ್ಬರ ರಕ್ಷಣೆ

Shilpa D

ಬೆಂಗಳೂರು: ಭಾರೀ ಮಳೆ ಮತ್ತು ಬಿರುಗಾಳಿಗೆ ಅರಮನೆ ಮೈದಾನದಲ್ಲಿ  ವಲಸೆ ಕಾರ್ಮಿಕರಿಗೆ ಹಾಕಲಾಗಿದ್ದ ಶೆಡ್ ನ ಮೇಲ್ಟಾವಣಿ ಗಾಳಿಗೆ ತೂರಿ ಹೋಗಿತ್ತು, ಮೇಲ್ಚಾವಣಿ ಕೆಳಗೆ ಸಿಕ್ಕಿಕೊಂಡಿದ್ದ ಇಬ್ಬರನ್ನು ಸದಾಶಿವನಗರ ಪೇದೆ ರಕ್ಷಿಸಿದ್ದಾರೆ.

ಸದಾಶಿವನಗರ ಪೇದೆ ರವಿ ಕುಮಾರ್  ಇಬ್ಬರು ವಲಸೆ ಕಾರ್ಮಿಕರ ಜೀವ ರಕ್ಷಿಸಿ ಹೀರೋ ಆಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿ ಸುಹೈಲ್ ಅಹ್ಮದ್ ಹೇಳಿದ್ದಾರೆ. ಇನ್ನೂ ಅರಮನೆ  ಮೈದಾನದ ಟೆನ್ನಿಸ್ ಪೆವಿಲಿಯನ್ ನಲ್ಲಿದ್ದವರನ್ನು ತ್ರಿಪುರ ವಾಸಿನಿ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. 20 ಮಕ್ಕಳು ಸೇರಿದಂತೆ 148 ಮಂದಿ ವಲಸೆ ಕಾರ್ಮಿಕರಿದ್ದು, ಅವರೆಲ್ಲರೂ ಭಯ ಮತ್ತು ನೋವಿನಿಂದ ಸಮಯ ಕಳೆಯುತ್ತಿದ್ದಾರೆ ಎಂದು ಅಹ್ಮದ್ ತಿಳಿಸಿದ್ದಾರೆ.

ಇದಕ್ಕೂ ಮೊದಲು ತ್ರಿಪುರ ವಾಸಿನಿ ಮೈದಾನವನ್ನು ಲಾಕ್ ಮಾಡಿದ್ದ ಮೇಲ್ವಿಚಾರಕ ಕೀ ತೆಗೆದುಕೊಂಡು ಅಲ್ಲಿಂದ ತೆರಳಿದ್ದ, ಹೀಗಾಗಿ ಅಲ್ಲಿದ್ದ ಒದ್ದೆಯಾಗಿದ್ದ ಬಸ್ ನಲ್ಲಿಯೇ ಕುಳಿತಿದ್ದರು.

ಅಸ್ಸಾಂ, ಉತ್ತರ ಪ್ರದೇಶ, ತ್ರಿಪುರಾ, ಮತ್ತು ಚತ್ತೀಸ್ ಗಡದ ವಲಸಿಗರು ಕಳೆದ ಕೆಲವು ದಿನಗಳಿಂದ ತಮ್ಮ ಮನೆಗೆ ತೆರಳಲು ಅರಮನೆ ಮೈದಾನದಲ್ಲಿ ಕಾಯುತ್ತಿದ್ದಾರೆ.  ಅವರನ್ನು ತವರಿಗೆ ಕಳುಹಿಸಲು ಬಿಬಿಎಂಪಿ ಅಗತ್ಯ ವ್ಯವಸ್ಥೆ ಮಾಡಬೇಕಾಗಿದೆ.

ಭಯದಿಂದ ವಲಸೆ ಕಾರ್ಮಿಕರು ನಮ್ಮ ಸಹಾಯಕ್ಕಾಗಿ ಕೋರಿದರು. ಸಂಕಷ್ಟದಲ್ಲಿ ಸಿಲುಕಿದ್ದ   ಕಾರ್ಮಿಕರನ್ನು ಪೊಲೀಸ್ ಪೇದೆ ಮತ್ತು  ಇತರರು ರಕ್ಷಿಸಿದ್ದಾರೆ.

SCROLL FOR NEXT