ಸಾಂದರ್ಭಿಕ ಚಿತ್ರ 
ರಾಜ್ಯ

ಭಾರಿ ಕಾರ್ಯಾಚರಣೆ: ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್, ಬಂಧನ

ಬೆಳ್ಳಂ ಬೆಳಗ್ಗೆ ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ.

ಆನೇಕಲ್: ಬೆಳ್ಳಂ ಬೆಳಗ್ಗೆ ನಾಲ್ವರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ.

ಅವಡದೇವನಹಳ್ಳಿಯಲ್ಲಿ ಗೋಪಿ, ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದರೆ, ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವ ಎಂಬುವವರ ಮೇಲೆ ಫೈರಿಂಗ್ ಮಾಡಿದ್ದಾರೆ. ಅ. 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಮಾಡಿದ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ  ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಮತ್ತು ಗೋಪಿಯನ್ನು ಶರಣಾಗುವಂತೆ ಸೂಚಿಸಿದ್ದರು. 

ಆದರೆ, ಪೊಲೀಸರ ಮಾತಿಗೆ ಕ್ಯಾರೇ ಎನ್ನದ ಆರೋಪಿಗಳು ಪೇದೆಗಳಾದ ಮಹೇಶ್ ಮತ್ತು ಸುರೇಶ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ್ದರು. ಹೀಗಾಗಿ ಆತ್ಮರಕ್ಷಣೆಗಾಗಿ ಆನೇಕಲ್ ಡಿವೈಎಸ್‌ಪಿ ಮಹಾದೇವ್ ಮತ್ತು ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣ ಅವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ  ಬಂಧಿಸಿದ್ದಾರೆ.

ಅಕ್ಟೋಬರ್ 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಆನೇಕಲ್ ಠಾಣೆ ಪೊಲೀಸರು ಅವಡದೇವನಹಳ್ಳಿಯಲ್ಲಿದ್ದ ಆರೋಪಿಗಳಾದ ಗಂಗಾ ಮತ್ತು ಗೋಪಿಯನ್ನು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿಗಳು  ಕಾನ್ಸ್‌ಟೇಬಲ್‌ಗಳಾದ ಮಹೇಶ್ ಮತ್ತು ಸುರೇಶ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳ ಕಾಲಿಗೆ ಆನೇಕಲ್ ಡಿವೈಎಸ್‌ಪಿ ಮಹಾದೇವ್ ಮತ್ತು ಆನೇಕಲ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣರಿಂದ ಫೈರಿಂಗ್ ನಡೆದಿದೆ.

ಇನ್ನು ಮುತ್ಯಾನಲ್ಲೂರಿನಲ್ಲಿ ಅನಂತ್ ಮತ್ತು ಬಸವನಿರುವ ಮಾಹಿತಿ ತಿಳಿದ ಅತ್ತಿಬೆಲೆ, ಸರ್ಜಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದರು. ಆದರೆ ಆರೋಪಿಗಳು ಶರಣಾಗದೆ ಪಿಸಿಗಳಾದ ಇರ್ಫಾನ್, ನಾಗರಾಜ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗುವುದಕ್ಕೆ  ಯತ್ನಿಸಿದ್ದಾರೆ. ಹೀಗಾಗಿ ಅತ್ತಿಬೆಲೆ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಮತ್ತು ಸರ್ಜಾಪುರ ಎಸ್‌ಐ ಹರೀಶ್‌ರಿಂದ ಗುಂಡಿನ ದಾಳಿ ನಡೆದಿದೆ. ಸದ್ಯ ನಾಲ್ವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್