ರಾಜ್ಯ

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚಿಸುತ್ತಿದ್ದ ನಾಲ್ವರ ಬಂಧನ

Raghavendra Adiga

ಬೆಂಗಳೂರು:  ಒ ಎಲ್ ಎಕ್ಸ್ ನಲ್ಲಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಉಮರ್ ಖಾನ್, ಸೈದ್, ವಜೀಬ್, ಸಾಹಿಲ್ ಬಂಧಿತ ಆರೋಪಿಗಳು.

ಆರೋಪಿಗಳು ಓಲೆಕ್ಸ್ ನಲ್ಲಿ ಕಡಿಮೆ ಬೆಲೆಗೆ ವಾಹನ ಮಾರಾಟಕ್ಕಿರುವ ಭಾವಚಿತ್ರವನ್ನು ಹರಿಬಿಡುತ್ತಿದ್ದರು. ನಂತರ ಗ್ರಾಹಕರು ವಾಹನ ಖರೀದಿಗಾಗಿ ಕರೆ ಮಾಡಿದಾಗ, ತಾವು ಸೇನೆಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿ ನಂಬಿಸುತ್ತಿದ್ದರು. ಸೇನೆಯಲ್ಲಿ ವರ್ಗಾವಣೆಗೊಂಡಿರುವುದರಿಂದ ಬೇರೆಗೆ ಹೋಗುತ್ತಿದ್ದು, ಅದಕ್ಕಾಗಿ ಕಾರು ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಿದ್ದರು. ಬಳಿಕ ತಮ್ಮ ಖಾತೆಗೆ ಹಣ ವರ್ಗಾವಣೆ ಗೊಳ್ಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಜನರಿಗೆ ಮೋಸ ಮಾಡುತ್ತಿದ್ದರು.

ಆರೋಪಿಗಳ ಬಂಧನದಿಂದ ಒಟ್ಟು 20 ಒಎಲ್ ಎಕ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಆರೋಪಿಗಳನ್ನು ಈಗಾಗಲೇ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಪ್ರಕರಣಗಳಲ್ಲಿ ಅಲ್ಲಿಂದ ಸಿಸಿಬಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

SCROLL FOR NEXT