ರಾಜ್ಯ

ಉಡುಪಿ: ಸಿಎಂ ಬಿಎಸ್‌ವೈ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದವನ ವಿರುದ್ಧ ದೂರು ದಾಖಲು

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವರ ಹೆಸರಿನಲ್ಲಿ ನಕಲಿ ಈ-ಮೇಲ್ ಖಾತೆ ತೆರೆದ ದುಷ್ಕರ್ಮಿಯ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಉಡುಪಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವರ ಹೆಸರಿನಲ್ಲಿ ನಕಲಿ ಈ-ಮೇಲ್ ಖಾತೆ ತೆರೆದ ದುಷ್ಕರ್ಮಿಯ ವಿರುದ್ಧ ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ cm@karnataka.gov.in ಹೆಸರಿನಿಂದ ಖಾತೆ ತೆರೆದು ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಡೈರೆಕ್ಟರ್ ಹಾಗೂ ರಿಜಿಸ್ಟಾರ್ ಆದ ಡಾ.ನಾರಾಯಣ್ ಸಭಾಹಿತ್ ಅವರಿಗೆ ಈ-ಮೇಲ್ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರ ಪ್ರಕಾರ ಮೇಲ್ ನಲ್ಲಿ ಹೀಗಿದೆ- “ಕಾಲೇಜುಗಳನ್ನು ಪುನಃ ತೆರೆಯುವ ಮಾಹೆ ಯೋಜನೆಗೆ ಸಂಬಂಧಿಸಿದಂತೆ ನಾಡಿನಾದ್ಯಂತಪೋಷಕರು ಮತ್ತು ವಿದ್ಯಾರ್ಥಿಗಳಿಂದ ಬಂದ ದೂರುಗಳಿಗೆ ಸಂಬಂಧಿಸಿದಂತೆ ನಾವು ಹಲವಾರು ಇಮೇಲ್‌ಗಳನ್ನು ಸ್ವೀಕರಿಸಿದ್ದೇವೆ. ಈಗಿನ ಪರಿಸ್ಥಿತಿ ನವೆಂಬರ್ / ಡಿಸೆಂಬರ್-2020 ರಲ್ಲಿ ಕಾಲೇಜುಗಳನ್ನು ತೆರೆಯಲು ಸೂಕ್ತವಲ್ಲ. 2 ನೇ ಜನವರಿ-2021 ರಂದು ಅಥವಾ ಅದಕ್ಕೂ ಮೊದಲು ಯಾವುದೇ ಕಾಲೇಜುಗಳನ್ನು ತೆರೆಯಲು ಅನುಮತಿ ಇಲ್ಲ ಎಂದು ಮಾಹೆ ಆಡಳಿತ ಮಂಡಳಿಗೆ ಅರಿವು ಮೂಡಿಸುವುದು ಈ ಮೇಲ್ ಉದ್ದೇಶವಾಗಿದೆ. ಅಲ್ಲದೆ 2 ನೇ ಜನವರಿ-2021 ರ ನಂತರ ಸಹ, ನೀವು ಕಾಲೇಜುಗಳನ್ನು ಮತ್ತೆ ತೆರೆಯಲು ಯೋಜಿಸುತ್ತಿದ್ದರೆ, ನೀವು ಪೋಷಕರ ಒಪ್ಪಿಗೆ ಪಡೆಯಬೇಕು .

ನಕಲಿ ಈ-ಮೇಲ್ ಐಡಿ ರಚಿಸಿದವನನ್ನು ಪತ್ತೆ ಹಚ್ಚಿಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೈಬರ್ ಪೊಲೀಸರಿಗೆ ದೂರುದಾರ ಡಾ.ನಾರಾಯಣ್ ಸಭಾಹಿತ್ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!