ರಾಜ್ಯ

ರಾಜ್ಯದಲ್ಲಿ ಇಂದು 5723 ಕೊರೋನಾ ಸೋಂಕಿತರು ಗುಣಮುಖ: 3156 ಹೊಸ ಪ್ರಕರಣಗಳು ಪತ್ತೆ

Nagaraja AB

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ  ಹೆಚ್ಚಾಗುತ್ತಿದ್ದು, ಇಂದು 5723 ಮಂದಿ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟಾರೇ ಗುಣಮುಖರಾದವರ ಸಂಖ್ಯೆ 794503 ಆಗಿದೆ.

ಇಂದು 3156 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.  ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 838929 ಆಗಿದೆ.
ಇಂದು 31 ಮಂದಿ ಮೃತಪಟ್ಟಿದ್ದು, ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 33095 ಆಗಿದೆ.

ಸದ್ಯ 3305 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಶೇಕಡಾವಾರು ಪ್ರಮಾಣ ಶೇ. 2.71 ರಷ್ಟಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ ಶೇ. 0.98 ರಷ್ಟಿದೆ.

SCROLL FOR NEXT