ರಾಜ್ಯ

ಚೆಕ್‌ ಬೌನ್ಸ್‌ ಪ್ರಕರಣ: ಮಾಳವಿಕಾ ಸಿದ್ಧಾರ್ಥ್‌ಗೆ ನಿರೀಕ್ಷಣಾ ಜಾಮೀನು 

Shilpa D

ಚಿಕ್ಕಮಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್‌ ಹೆಗ್ಡೆ ಪತ್ನಿ ಮಾಳವಿಕಾ ಸಿದ್ಧಾರ್ಥ್‌ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಮಾಳವಿಕಾ ಸಿದ್ಧಾರ್ಥ್ ಸೇರಿದಂತೆ ಎಂಟು ಜನರ ವಿರುದ್ಧ ಮೂಡಿಗೆರೆ ಜೆಎಂಎಎಫ್‌ಸಿ ಕೋರ್ಟ್ ಇತ್ತೀಚೆಗೆ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿತ್ತು. 

ಎಂಟು ಜನರ ಪೈಕಿ ಮಾಳವಿಕ ಸಿದ್ದಾರ್ಥ ಹೆಗ್ಡೆ ಸೇರಿದಂತೆ ಐವರಿಗೆ ಜಾಮೀನು ಮಂಜೂರಾಗಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್ ಕೆ. ಎಂಬುವವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಸಿದ್ಧಾರ್ಥ್ ಒಡೆತನದ ಎಬಿಸಿ ಸಂಸ್ಥೆಗೆ ಕಾಫಿ ಬೆಳೆಯನ್ನು ನೀಡಿದ್ದ ಸುಮಾರು 300ಕ್ಕೂ ಹೆಚ್ಚು ಬೆಳೆಗಾರರಿಗೆ ಸಂಸ್ಥೆಯು ಹಣ ಪಾವತಿಸಿರಲಿಲ್ಲ. 100 ಕೋಟಿ ರೂಪಾಯಿಗೂ ಅಧಿಕ  ಹಣವನ್ನು ಬೆಳಗೆಗಾರರಿಗೆ ನೀಡದೇ ಬಾಕಿ ಉಳಿಸಿಕೊಳ್ಳಲಾಗಿತ್ತು.

SCROLL FOR NEXT