ಅಂಜಲಿ ನಿಂಬಾಳ್ಕರ್ 
ರಾಜ್ಯ

ಡಿಸಿಸಿ ಬ್ಯಾಂಕ್ ಚುನಾವಣೆ: ಶಾಸಕಿ ಅಂಜಲಿ ನಿಂಬಾಳ್ಕರ್'ಗೆ ಸೋಲು

ತೀವ್ರ ಕುತೂಹಳ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್'ನ 3 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಖಾನಾಪುರ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಸೋಲನ್ನು ಅನುಭವಿಸಿದ್ದಾರೆ. 

ಬೆಳಗಾವಿ: ತೀವ್ರ ಕುತೂಹಳ ಕೆರಳಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್'ನ 3 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಖಾನಾಪುರ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಸೋಲನ್ನು ಅನುಭವಿಸಿದ್ದಾರೆ. 

ಶಾಸಕಿ ಅಂಜಲಿ ವಿರುದ್ಧ 2 ಮತಗಳ ಅಂತರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಜಯಭೇರಿ ಬಾರಿಸಿದ್ದಾರೆ. 

ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಅರವಿಂದ ಪಾಟೀಲರಿಗೆ 27 ಮತಗಳು ಬಿದ್ದಿದ್ದರೆ, ಅಂಜಲಿಯವರಿಗೆ 25 ಮತಗಳು ಬಿದ್ದಿವೆ. 

ಪ್ರತ್ಯೇಕ ಬಣಗಳಾಗಿದ್ದ ಡಿಸಿಎಂ ಲಕ್ಷ್ಮಣ್ ಸವದಿ ಮತ್ತು ಕತ್ತಿ ಹಾಗೂ ಜಾರಕಿಹೊಳಿ ಸಹೋದರರು ಪಕ್ಷದ ವರಿಷ್ಠರ ಆದೇಶದಿಂದಾಗಿ ಒಂದಾಗಿ ಅವಿರೋಧ ಆಯ್ಕೆದೆ ನಡೆಸಿದ್ದ ಪ್ರಯತ್ನ ಫಲಕೊಡಲಿಲ್ಲ. 

ಎಲ್ಲರ ಆಶೀರ್ವಾದದಿಂದ ಮುಂದೆ ಕೆಲಸ ಮಾಡುತ್ತೇನೆ. ನನಗೆ 25 ಮತ್ತು ವಿರೋಧ ಪಕ್ಷಕ್ಕೆ 27 ಮತಗಳು ಬಂದಿವೆ. ಕೇವಲ 2 ಮತಗಳಿಂದ ಸೋತಿದ್ದೇನೆ. ಕ್ರಾಸ್ ವೋಟಿಂಗ್ ಆಗಿಲ್ಲ. ನಾನು ನಂಬಿದವರು ನನಗೆ ಮತ ಹಾಕಿದ್ದಾರೆ. ನನಗೆ ಯಾವುದೇ ರೀತಿಯ ಹಿನ್ನಡೆಯಾಗಿಲ್ಲ. ಹೆಣ್ಣು ಮಗಳಾಗಿ ನಾನು ಇಷ್ಟು ಹೋರಾಟ ಮಾಡಿರುವುದು ಹೆಮ್ಮೆಯೆನಿಸುತ್ತಿದೆ ಎಂದು ಅಂಜಲಿಯವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT