ರಾಜ್ಯ

ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಲಿವೆ!

Srinivas Rao BV

ಬೆಂಗಳುರು: 13 ವರ್ಷಗಳ ಬಳಿಕ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಇನ್ಮುಂದೆ ರೈಲುಗಳು ಪ್ರತಿ ಗಂಟೆಗೆ 100 ಕಿಮೀ ವೇಗದಲ್ಲಿ ಸಂಚರಿಸಲಿವೆ. ಪ್ರಸ್ತುತ ಗಂಟೆಗೆ 75 ಕಿ.ಮೀ ಸಂಚರಿಸುತ್ತಿದ್ದು, ಈ ಬದಲಾವಣೆಯ ಮೂಲಕ ನೈಋತ್ಯ ರೈಲ್ವೆಯಲ್ಲಿ 8 ಪ್ರದೇಶಗಳಲ್ಲಿ ಹೆಚ್ಚಿನ ವೇಗದಲ್ಲಿ ರೈಲುಗಳು ಸಂಚರಿಸಲಿವೆ.

110 ಕಿ.ಮೀ ವೇಗದಲ್ಲಿ ಸ್ಪೀಡ್ ಟೆಸ್ಟ್ ನಡೆಸಲಾಗಿದ್ದು, ಈಗ ಗರಿಷ್ಠ 100 ಕಿಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ ಎಂದು ಎಸ್ ಡಬ್ಲ್ಯುಆರ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ ತಿಳಿಸಿದ್ದಾರೆ.

ಬೈಯ್ಯಪ್ಪನಹಳ್ಳಿ-ಧರ್ಮಾವರಂ, ಪೆನುಕೊಂಡ- ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ- ಧರ್ಮಾವರಂ, ಕೆಎಸ್ಆರ್ ಬೆಂಗಳೂರು-ಜೋಲಾರ್ ಪೆಟ್ಟೈ (ಡಬಲ್ ಲೈನ್), ಯಶವಂತಪುರ-ತುಮಕೂರು (ಡಬಲ್ ಲೈನ್), ಯಶವಂತಪುರ-ತುಮಕೂರು (ಡಬಲ್ ಲೈನ್) ಹಾಗೂ ಬೀರೂರು-ಚಿಕ್ಕಜಾಜೂರು ಮಾರ್ಗಗಳಲ್ಲಿ 110 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ಇದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಎಸ್ ಡಬ್ಲ್ಯುಆರ್ ರೈಲುಗಳ ವೇಗವನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದು 110 ಕಿ.ಮೀ ವೇಗಗತಿಯಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ ತಿಳಿಸಿದ್ದಾರೆ.

SCROLL FOR NEXT