ರಾಜ್ಯ

'ಅನಧಿಕೃತವಾಗಿ ದೇವಾಲಯ ಕಟ್ಟಲಾಗಿದೆ ಎನ್ನುತ್ತೀರಿ, ಅಲ್ಲೇ ಪ್ರಾರ್ಥನೆ ಮಾಡುತ್ತೀರಲ್ಲಾ?': ಅರ್ಜಿದಾರರಿಗೆ 'ಹೈ' ಪ್ರಶ್ನೆ

Shilpa D

ಬೆಂಗಳೂರು: ದೇವಾಲಯ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಿರುವ ನೀವು ಅದೇ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರಲ್ಲಾ ಎಂದು ಕರ್ನಾಟಕ ಹೈಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿದೆ.

ಅರ್ಜಿದಾರರನ್ನು ಪರ ಬೋನೊ ಲಿಟಿಗೆಂಟ್ ಆಗಿ  ಮುಂದುವರಿಸಲು ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ವಿಶ್ವನಾಥ್ ಶೆಟ್ಟಿ ಅವರನ್ನೊಳಗೊಂಡ ಪೀಠ ತಿಳಿಸಿದೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಗಿರಿಯಲ್ಲಿ ಶಿವಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಇದೆ. ಅದರೊಂದಿಗೆ ಈಗ ಹಲವು ಕಟ್ಟಡಗಳು ಈಗ ತಲೆ ಎತ್ತಿವೆ. ಎಲ್ಲವೂ ಸರ್ಕಾರಿ ಜಾಗದಲ್ಲೇ ಇವೆ’ ಎಂದು ತರಿಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ನಿವಾಸಿ ವೇಲುಮುರುಗನ್ ಅರ್ಜಿ ಸಲ್ಲಿಸಿದ್ದಾರೆ. 

‘ಈ ದೇವಾಲಯವನ್ನು ಮಠಾಧೀಶರೊಬ್ಬರು ನಿರ್ವಹಿಸುತ್ತಿದ್ದರು. ಮಠಾಧೀಶರು ಮೃತಪಟ್ಟ ನಂತರ ಅವರ ಮಕ್ಕಳು ಆಡಳಿತ ನಿರ್ವಹಿಸುತ್ತಿದ್ದಾರೆ. ಸುತ್ತಮುತ್ತಲ 20 ಎಕರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಲ್ಯಾಣ ಮಂಟಪ ಮತ್ತು ಅತಿಥಿ  ಗೃಹಗಳನ್ನು ನಿರ್ಮಿಸಿದ್ದಾರೆ. ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

‘ಸರ್ಕಾರಿ ಜಾಗದಲ್ಲಿ ದೇವಸ್ಥಾನ ಇದೆ ಎಂಬುದನ್ನು ಅರ್ಜಿದಾರರೇ ಹೇಳುತ್ತಿದ್ದಾರೆ. ದೇಗುಲದ ಭಕ್ತ ಎಂದು ಹೇಳಿಕೊಳ್ಳುವ ಅವರು ಅಲ್ಲಿಗೆ ಭೇಟಿ ನೀಡುತ್ತಿದೆ, ಹೀಗಾಗಿ ಅವರನ್ನು ಪ್ರೊ ಬೋನೋ ಲಿಟಿಗೆಂಟ್ ಆಗಿ ಅನುಮತಿಸಲು ಸಾಧ್ಯವಿಲ್ಲ ಎಂದು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಿಳಿಸಿದೆ.

ಸೆಪ್ಟಂಬರ್ 30 ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಅನಧಿಕೃತವಾಗಿ ದೇವಾಲಯ ನಿರ್ಮಾಣವಾದ ಮಾತ್ರಕ್ಕೆ ಯಾವ ದೇವರು ಕೂಡ ಪ್ರಾರ್ಥನೆ ಮಾಡಬಾರದು ಎಂದು ಹೇಳುವುದಿಲ್ಲ ಎಂದು ಪೀಠ ತಿಳಿಸಿದೆ. 

ನಾನು ಹುಟ್ಟುವುದಕ್ಕೆ ಮುಂಚೆ ದೇವಾಲಯ ನಿರ್ಮಾಣವಾಗಿತ್ತು, ನನ್ನ ಕುಟುಂಬಸ್ಥರು ಈ ದೇವರ ಆರಾಧಕರಾಗಿದ್ದಾರೆ, ದೇವಾಲಯ ಅನಧಿಕೃತವಾಗಿ ನಿರ್ಮಿಸಿರುವುದು ನಂತರ ನನಗೆ ತಿಳಿಯಿತು, ದೇವಾಲಯದ ಮೇಲೆ ನನ್ನ ಕುಟುಂಬಸ್ಥರು ನಂಬಿಕೆ ಇಟ್ಟಿದ್ದಾರೆ ಎಂದು ಅರ್ಜಿದಾರ ವೇಲ್ ಮುರುಗನ್ ತಿಳಿಸಿದ್ದಾರೆ.

ದೇವಾಲಯದ ದುರುಪಯೋಗ ಮತ್ತು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಪ್ರಶ್ನಿಸುವುದೇ ಬೇರೆ,  ದೇವಾಲಯದ ಭೇಟಿಯೇ ಬೇರೆ ಎಂದು ಅವರು ಹೇಳಿದ್ದಾರೆ. ದೇವಾಲಯವನ್ನು ಮುಜರಾಯಿ ಇಲಾಖೆ ಹಸ್ತಾಂತರಿಸುವಂತೆ ಸೂಚಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

SCROLL FOR NEXT