ರಾಜ್ಯ

ಇಂದು ಸಚಿವ ಸಂಪುಟ ಸಭೆ: ಎಸ್ಸಿ-ಎಸ್ಟಿ ಕೋಟಾ, ಸಾಲ, ಜಲ ಯೋಜನೆಗಳಿಗೆ ಸರ್ಕಾರ ಆದ್ಯತೆ

Sumana Upadhyaya

ಬೆಂಗಳೂರು: ರಾಜ್ಯ ಸರ್ಕಾರ ಬುಧವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಮೀಸಲಾತಿಯನ್ನು ಹೆಚ್ಚಿಸುವ ವಿಷಯವನ್ನು ಸಂಪುಟ ಸಭೆಯಲ್ಲಿ ಕೈಗೆತ್ತಿಕೊಳ್ಳಲಿದೆ.

ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಜಾರಿಗೆ ತರಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಒಕ್ಕೂಟಗಳು ಬಯಸುತ್ತಿವೆ. ಪರಿಶಿಷ್ಟ ಜಾರಿಗೆ ಶೇಕಡಾ 15ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡಾ 3ರಷ್ಟು ಮೀಸಲಾತಿಯನ್ನು ಕೋರಿದೆ. 

ಇಂದಿನ ಸಂಪುಟ ಸಭೆಯಲ್ಲಿ, ರಾಜ್ಯದಲ್ಲಿ ಸಾಗುತ್ತಿರುವ ನೀರಿನ ಯೋಜನೆಗಳಿಗೆ ಸಾಲವನ್ನು ಪ್ರಕ್ರಿಯೆಗೊಳಿಸುವುದು - ಕೃಷ್ಣ ಭಾಗ್ಯ ಜಲ ನಿಗಮ ಅಡಿಯಲ್ಲಿ 500 ಕೋಟಿ ರೂಪಾಯಿ, ಕರ್ನಾಟಕ ನೀರಾವರಿ ನಿಗಮ ಅಡಿಯಲ್ಲಿ ಎರಡು ಸಾಲಗಳು 900 ಕೋಟಿ ರೂಪಾಯಿ ಮತ್ತು 250 ಕೋಟಿ ರೂಪಾಯಿ ವಿಶ್ವೇಶ್ವರಯ ಜಲ ನಿಗಮ ಲಿಮಿಟೆಡ್ ಅಡಿಯಲ್ಲಿ ಒಟ್ಟು ಸಾಲಗಳು ಸುಮಾರು 1,650 ಕೋಟಿ ರೂಪಾಯಿಗಳನ್ನು ಸಾಲ ಪಡೆಯಲು ನೋಡುತ್ತಿದೆ.

ಇದರ ಜೊತೆಗೆ, ಮತದಾನದ ವ್ಯಾಪ್ತಿಯ ಬೆಳಗಾವಿ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ಅನುಮೋದಿಸುವ ಪ್ರಸ್ತಾಪವನ್ನು ಸಂಪುಟ ಪರಿಶೀಲಿಸುತ್ತದೆ. ಸಂಸದ ಮತ್ತು ಸಚಿವ ಸುರೇಶ್ ಅಂಗಡಿ ಇತ್ತೀಚೆಗೆ ನಿಧನರಾದ ನಂತರ ಬೆಳಗಾವಿ ಲೋಕಸಭಾ ಸ್ಥಾನ ಖಾಲಿ ಇದ್ದು, ಶೀಘ್ರದಲ್ಲೇ ಇಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 23.63 ಕೋಟಿ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಪುಟ ಅನುಮೋದನೆ ನೀಡಲಿದೆ.

SCROLL FOR NEXT