ರಾಜ್ಯ

ನಿಧಿ ಶೋಧ ಶಂಕೆ: ದುಷ್ಕರ್ಮಿಗಳಿಂದ ಇತಿಹಾಸ ಪ್ರಸಿದ್ಧ ಬೇಲೂರು ದೇಗುಲದ ಮಹಾಕಾಳಿ ವಿಗ್ರಹ ಧ್ವಂಸ

Srinivasamurthy VN

ಹಾಸನ: ಐತಿಹಾಸಿಕ ಬೇಲೂರು ದೇಗುಲದಲ್ಲಿ ದುಷ್ಕರ್ಮಿಗಳು ದಾಳಿ ಮಾಡಿದ್ದು, ದೇಗುಲದ ಮಹಾಕಾಳಿ ವಿಗ್ರವನ್ನು ಧ್ವಂಸ ಮಾಡಿದ್ದಾರೆ.

ಬೇಲೂರು ತಾಲ್ಲೂಕಿನ ದೊಡ್ಡಗದ್ದವಳ್ಳಿಯಲ್ಲಿರುವ ಐತಿಹಾಸಿಕ ಲಕ್ಷ್ಮಿ ದೇವಸ್ಥಾನ್ಕೆ ಮಂಗಳವಾರ ತಡರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು  ದೇಗುಲದ ಮಹಾಕಾಳಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಆದರೆ ಇದೇ ವಿಗ್ರಹದ ಎದುರಿಗಿದ್ದ ಶಿವ ಮತ್ತು ವಿಷ್ಣು ವಿಗ್ರಹಗಳನ್ನು ದುಷ್ಕರ್ಮಿ ಏನೂ ಮಾಡಿಲ್ಲ ಎಂದು ತಿಳಿದುಬಂದಿದೆ. ದೇಗುಲ ಗ್ರಾಮದ ಹೊರಗೆ ಇರುವುದರಿಂದ ರಾತ್ರಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ದೇಗುಲದ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಮೇಲ್ನೋಟಕ್ಕೆ ಇದು ನಿಧಿಗಾಗಿ ನಡೆಸಿರುವ ಕೃತ್ಯದಂತೆ ಕಂಡಬರುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಸುಮಾರು 800 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ದೇಗುಲವನ್ನು ಹೊಯ್ಸಳ ವಂಶಸ್ಥರು ನಿರ್ಮಿಸಿದ್ದರು. ದೇಗುಲವನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಲಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಅಧೀನದಲ್ಲಿ ಈ ದೇಗುಲವಿದೆ. ದೇಗುಲದಲ್ಲಿನ ವಿಶೇಷ ವಿಗ್ರಹಗಳು ಮತ್ತು ಕಲ್ಲಿನ ಕೆತ್ತನೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 

ಆದರೆ ಪುರಾತತ್ವ ಇಲಾಖೆಯ ಬೇಜವಾಬ್ದಾರಿ ತನದಿಂದಾಗಿ ಇಂದು ದೇಗುಲಕ್ಕೆ ದುಷ್ಕರ್ಮಿಗಳು ನುಗ್ಗಿ ಅಪರೂಪದ ಕಾಳಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ದೇಗುಲಕ್ಕೆ ಸೂಕ್ತ ಭದ್ರತೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಉಪ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿದ್ದು, ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಘಟನೆ ಖಂಡಿಸಿದ ಸ್ವಾಮೀಜಿ
ಇನ್ನು ದುಷ್ಕರ್ಮಿಗಳು ಕೃತ್ಯವನ್ನು ಅರೆಮಾದನಹಳ್ಳಿ ಮಠ ಅರಕಲಗೂಡಿನ ಶಿವ ಸುಜ್ನಾನ ಮೂರ್ತಿ ಸ್ವಾಮೀಜಿ ಖಂಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ, ಅದೇ ಸ್ಥಳದಲ್ಲಿ ಹೊಸ ಮಹಾಕಾಳಿ ವಿಗ್ರಹವನ್ನು ಶೀಘ್ರವಾಗಿ ಸ್ಥಾಪಿಸುವಂತೆ ಜಿಲ್ಲಾ ಅಧಿಕಾರಿಗಳನ್ನು ಒತ್ತಾಯಿಸಿದರು.
 

SCROLL FOR NEXT